ಚಿಕ್ಕೋಡಿ: 2026 ಮಹಾಶಿವರಾತ್ರಿ ನಿಮಿತ್ಯವಾಗಿ ಶ್ರೀ ಮಹಾದೇವ ದೇವಸ್ಥಾನ ಹಾಗೂ ಭಕ್ತರ ವತಿಯಿಂದ ಈ ವರ್ಷ ಮಹಾರಥೋತ್ಸವವನ್ನು ಮಾಡಲಾಗುವುದು.
ಚಿಕ್ಕೋಡಿ ಪಟ್ಟಣದ ಶ್ರೀ ಮಹಾದೇವ ದೇವಸ್ಥಾನದಲ್ಲಿ ಸುಮಾರು 12 ವರ್ಷಗಳಿಂದ ಸ್ವಚ್ಛತಾ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಸರೋಜಿನಿ ಮಾಳಿ ಅವರನ್ನು ಶ್ರೀ ಮಹಾದೇವ ದೇವಸ್ಥಾನ ಕಮಿಟಿ ವತಿಯಿಂದ ಗೌರವ ಧನ ಕೊಟ್ಟು ಸತ್ಕರಿಸಲಾಯಿತು.
ನಂತರ ಮಹಾದೇವ ದೇವಸ್ಥಾನ ಪೂಜಾರಿ ಶ್ರೀ ಶಿವಶಂಕರ ಶಾಸ್ತ್ರಿ ಹಿರೇಮಠ ಅವರು ಮಾತನಾಡಿ
2026 ಸಾಲಿನಲ್ಲಿ ಮಹಾಶಿವರಾತ್ರಿಯ ನಿಮಿತ್ಯವಾಗಿ ಶ್ರೀ ಮಹಾದೇವ ದೇವಸ್ಥಾನದ ಕಮಿಟಿಯ ಸರ್ವ ಸದಸ್ಯರು ಮತ್ತು ಚಿಕ್ಕೋಡಿಯ ಎಲ್ಲಾ ಭಕ್ತರ ಆಶಯದಂತೆ 2026ರಲ್ಲಿ ಮಹಾರುಥೋತ್ಸವವನ್ನು ಮಾಡುವುದಾಗಿ ಇವತ್ತಿನ ದಿವಸ ನಿಶ್ಚಯಿಸಲಾಗಿದೆ ಅದಕ್ಕಾಗಿ ಚಿಕ್ಕೋಡಿಯ ಸಭಕ್ತರು ಈ ಮಹಾರಾತ್ಯೋತ್ಸವಕ್ಕೆ ಭಕ್ತಾದಿಗಳೆಲ್ಲರೂ ಸೇವೆ ಸಲ್ಲಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಅದೇ ರೀತಿಯಾಗಿ ಮಹಾದೇವ ದೇವಸ್ಥಾನಕ್ಕೆ ಸಬ್ಬಕ್ತರು ಅಂದಿನಿಂದನವರೆಗೆ ಬಹಳಷ್ಟು ಕಾರ್ಯಕ್ರಮಗಳಿಗೆ ತಮ್ಮ ಅನುಮಾನದಿಂದ ಸೇವೆಯನ್ನು ಸಲ್ಲಿಸಿದ್ದಾರೆ .
ಲಕ್ಷದೀಪೋತ್ಸವ ಕಾರ್ಯಕ್ರಮದಿಂದ ಪ್ರಾರಂಭವಾಗಿ ಇದುವರೆಗೆ ಈ ದೇವಸ್ಥಾನದ ಸಮಯವನ್ನು ದೇವಸ್ಥಾನಕ್ಕೆ ಮೀಸಲಿಟ್ಟು ಬಾಳ ಸಮಯ ನಿರ್ಮಾಣ ಆಗಲಿಕ್ಕೆ ಕಾರಣಭೂತರಾಗಿದ್ದಾರೆ ದೇವಸ್ಥಾನ ಕಮಿಟಿಯಲ್ಲಿ ಇಟ್ಟಿರುವ ಸುಮಾರು ಹತ್ತು ಲಕ್ಷ ರೂಪಾಯಿಗಳಿಂದ ಸುಸಜ್ಜಿತವಾಗಿ ಮದುವೆ ಮಂಡಪ್ಪವನ್ನು ಮಾಡಲಾಗಿದೆ ಈ ಮಂಡಪದ ಎಲ್ಲ ಭಕ್ತರು ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ನಂತರ ರವಿ ಹಂಪನವರ ಮಾತನಾಡಿದರು, ಈ ಕಾರ್ಯಕ್ರಮದಲ್ಲಿ ಶ್ರೀ ಮಹಾದೇವ ದೇವಸ್ಥಾನ ಕಮಿಟಿ ಅಧ್ಯಕ್ಷರು ಸುರೇಶ್ ಮಲ್ಲಪ್ಪ ಪರಾಳಿ, ಉಪಾಧ್ಯಕ್ಷರು ರವೀಂದ್ರ ಗುರಪ್ಪ ಅಕ್ಕತಂಗಿರಾಳ,
ಮಹಾದೇವ್ ದೇವಪ್ಪ ವರುಟಿ ,ರವೀಂದ್ರ ಬಸವಣ್ಣಿ ಹಂಪನವರ್, ಸಿರಿಸಿದ್ದೇಶ್ವರ್ ರಾಮಗೌಡ ಪಾಟೀಲ್, ಶಿವರಾಜ್ ಬಸವರಾಜ್ ಮಿರ್ಜಿ, ಬಸವರಾಜ್ ರಾಮಚಂದ್ರ ವಸುಂಡಿ, ಶಂಕರ್ ಬಸವಣ್ಣಿ ಕಿಲಾರಿ, ಸಂಜು ಕುಮಾರ್ ಜಾದವ್, ಅಜಿತ್ ರುದ್ರಪ್ಪ ಕಾಗಲಿ, ಆನಂದ್ ಮಧುಕರ್ ಬೋಲಾಜಿ, ಹಾಗೂ ಮತ್ತ ಇತಿತರರೆಲ್ಲ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




