ಬಸವನ ಬಾಗೇವಾಡಿ: ತಾಲೂಕಿನ ಕರ್ನಾಟಕ ರಾಜ್ಯ ವಿವಿದ ದಲಿತ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ಮಾನ್ಯ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಬಿ.ಆರ್. ಗವಾಯಿ ಅವರ ಮೇಲೆ ಶೊ ಎಸೆದ ಅವಮಾನಿಸಿದ ವಕೀಲ್ ಕಿಶೋರ ಮೇಲೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಲಾಯಿತು.
ಬಸವನ ಬಾಗೇವಾಡಿ ತಾಲೂಕಿನ ದಲಿತ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಮಾನ್ಯ ತಾಲೂಕ ಗ್ರೇಡ್ 2 ತಹಶೀಲ್ದಾರ H S ಅರಕೇರಿ ಅವರ ಮುಖಾಂತರ ಗೌರವಾನ್ವಿತ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು .
ಹಾಗೂ ವಿವಿದ ದಲಿತ ಪರ ಸಂಘಟನೆಯ ಜಿಲ್ಲಾ ಸಂಚಾಲಕರು ಹಾಗೂ ತಾಲೂಕು ಸಂಚಾಲಕರು ಮಾತನಾಡಿ ಕಠಿಣವಾದ ಶಿಕ್ಷೆ ಕೊಡಬೇಕೆಂದು ಆಗ್ರಹಿಸಿದರು. ಮಾಂತೇಶ್ ಸಾಸಾಬಾಳ. ಗುರುರಾಜ್ ಗುಡಿಮನಿ ಚಂದ್ರಶೇಖರ್ ನಾಲತವಾಡ ಯಮನೂರಿ ಚಲವಾದಿ ತಮ್ಮಣ್ಣ ಕಾಣಗಡ್ಡಿ ರಾಜು ದಿಂಡವಾರ
ಯಮನೂರಿ ಮ್ಯಾಗೇರಿ ಹಿರಿಯರಾದ ಈಶ್ವರ್ ಚಲವಾದಿ ಹಾಗೂ ಕಾಳಪ್ಪ ಮಸಬಿನಾಳ ಹಾಗೂ ವಿವಿದ ಮುಖಂಡರು ಭಾಗವಹಿಸಿದ್ದರು.
ವರದಿ: ಕೃಷ್ಣಾ ರಾಠೋಡ




