ಚಾಮರಾಜನಗರ :ಜನಪ್ರತಿನಿದಿಗಳಿಗೆ ದಲಿತಬೀದಿ ಕಂಡರೆ ಯಾಕೆ ತಾತ್ಸಾರ ಎಂದ ಅಂಬಳೆ ಗ್ರಾಮಸ್ಥರ ಆಕ್ರೋಶ ಅಂಬಳೆ ಗ್ರಾಮದಲ್ಲಿ ಜನರ ಗೋಳು ಕೇಳುವವರು ಯಾರು ಇಲ್ಲಾ ವೋಟು ಕೇಳೋಕೆ ಮಾತ್ರ ಬೇಕು ದಲಿತ ಕೇರಿ ನಮಗೆ ಸಮಸ್ಯೆ ಆದರೆ ಬರವರು ಯಾರೂರಿ? ಎಂದ ಮಹಿಳೆಯರುಮುಂದಿ ಬರುವ ಎಲ್ಲಾ ಚುನಾವನೆಗಳಿಗೂ ಮತದಾನ ಬಹಿಸ್ಕಾರ ಮಾಡುತೇವೆ ಎಂದ ಗ್ರಾಮಸ್ಥರು ಅಂಬಳೆ ಗ್ರಾಮದಲ್ಲಿ ಜನರ ಆಕ್ರೋಶ! ನೀರು ಚರಂಡಿ ಸಮಸ್ಯೆಗೆ ಪರಿಹಾರ ಇಲ್ಲ.
ಯಳಂದೂರು ತಾಲೂಕಿನ ಅಂಬಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಅಂಬಳೆ ಗ್ರಾಮದ ದಲಿತರ ಬಡಾವಣೆಯ ಗ್ರಾಮಸ್ಥರು ಆಡಳಿತ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ದಿನ ನಿತ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ನಮ್ಮ ಕಷ್ಟ ಕೇಳುವರು ಯಾರು? ಓಟಿಗಾಗಿ ಮನೆಯ ಬಾಗಿಲಿಗೆ ಬರುತ್ತಾರೆ ಗೆದ್ದ ಮೇಲೆ ಇತ್ತಕಡೆ ಯಾರು ಬರುವುದಿಲ್ಲ ಎಂದು ಸ್ಥಳೀಯರು ಹೇಳಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ….
ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ವರ್ಷ ಕಳೆದಿದೆ ಎಷ್ಟೋ ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲಾ.
ಮಳೆ ಬಂದರೆ ಮನೆಯ ಅಂಗಳ ಕೆರೆಯಂತಾಗುತ್ತದೆ ಚರಂಡಿಗಳು ನದಿಯಂತಾಗುತ್ತದೆ ನಿಂತಲ್ಲೇ ನಿಂತು ಗಬ್ಬು ವಾಸನೆ ಬೀರುತ್ತದೆ.
ಇತ್ತೀಚಿಗೆ ಮಾದರಿ ಗ್ರಾಮ ಪಂಚಾಯಿತಿ ಎಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಜನ ಪ್ರತಿನಿಧಿಗಳು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾದರಿ ಗ್ರಾಮ ಪಂಚಾಯಿತಿಯೋ ಇಲ್ಲಾ ಸಮಸ್ಯೆ ತುಂಬಿದ ಪಂಚಾಯಿತಿಯೋ ನೋಡಬೇಕಿದೆ.
ಮೊದಲಿಗೆ ಪಂಚಾಯಿತಿ ಅಧಿಕಾರಿಗಳು ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ವಾರ್ಡ್ ಗಳಲ್ಲಿನ ಸಮಸ್ಯೆಗಳನ್ನು ಸದಸ್ಯರು ಅದ್ಯಕ್ಷರು ಆಲಿಸಿ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಆದರೆ ಇಲ್ಲಿ ಯಾವ ಸಮಸ್ಯೆಗಳು ಬಗೆ ಹರಿಯದಂತೆ ಕಾಣುತ್ತಿಲ್ಲ ಒಂದು ವೇಳೆ ವಿಷ ಜಂತುಗಳಿಂದ ತೊಂದರೆ ಯಾದರೆ ನೇರ ಅಧಿಕಾರಿಗಳೆ ಹೊಣೆ ಆಗುತ್ತಾರೆ ಎಂದು ಸ್ಥಳೀಯರು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಇಡಿ ಶಾಪ ಹಾಕುತಿದ್ದಾರೆ.
ವರದಿ :ಸ್ವಾಮಿ ಬಳೇಪೇಟೆ




