ಕಲಬುರಗಿ: ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಆ 9 ರಂದು ಗುರುವಾರ ತಡರಾತ್ರಿಯಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರಮೂರ್ತಿ ಭಗ್ನಗೊಳಿಸಿ ಮೂರ್ತಿಗೆ ಅವಮಾನಗೊಳಿಸಲಾಗಿದೆ.ಇದು ಕೋಲಿ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ.

ಕೋಲಿ, ಕಬ್ಬಲಿಗ ಸಮಾಜದ ಗುರುಗಳು ಹಾಗೂ ಸಾವಿರಾರು ವರ್ಷಗಳಿಂದ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳ ವಿರುದ್ಧ ಅರಿವು ಮೂಡಿಸಿದ ಮಹಾ ಜ್ಞಾನಿ. ಸಮಾಜದಲ್ಲಿನ ಮೌಢ್ಯದ ಅಂಧಕಾರವನ್ನು ಅಳಿಸಿ, ಚಿಂತನೆಯ ಬೆಳಕು ಹೊತ್ತಿಸುವಲ್ಲಿ ಅಂಬಿಗರ ಚೌಡಯ್ಯ ಅವರ ಪಾತ್ರ ಹಿರಿದು. ಅವರ ವಚನಗಳು ನಮ್ಮಲ್ಲಿ ವಿಚಾರವಂತಿಕೆ ಮೂಡಿಸುತ್ತದೆ.
ಬಸವಾದಿ ಶರಣರ ಸಮಕಾಲಿನ ಶರಣರಲ್ಲಿ, ನಿಜಶರಣ ಎಂದೇ ಖ್ಯಾತಿ ಪಡೆದಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿ ಅವಮಾನಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸಿರುವ ಕಿಡಿಗೇಡಿಗಳನ್ನು ಈ ಕೂಡಲೆ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆನಂದ್ ಶಿವನೊಳ್ ಗ್ರಾಮ ಪಂಚಾಯತ್ ಸದಸ್ಯರು ಇಟಕಾಲ್ ಹಾಗೂ ಅಂಬೇಡ್ಕರ್ ಯುವ ಸೇನೆ ತಾಲೂಕ ಕಾರ್ಯದರ್ಶಿ ಸೇಡಂ ರವರು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




