
ಧಾರವಾಡ: ರಂಗಾಯಣ ನಿರ್ದೇಶಕರಾಗಿದ್ದ ಹಾಸ್ಯ ನಟ, ರಂಗಭೂಮಿ ಕಲಾವಿಧ, ರಂಗಕರ್ಮಿ ರಾಜು ತಾಳಿಕೋಟಿ (62) ಅವರು ಇಂದು (ಅ.13) ಸಂಜೆ ಮಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರ ಹೃದಯಘಾತದಿಂದ ನಿಧನರಾದರು ಎಂದು ಅವರ ಮಗ ಭರತ ತಾಳಿಕೋಟಿ ತಿಳಿಸಿದ್ದಾರೆ.
ಚಲನಚಿತ್ರದ ಚಿತ್ರೀಕರಣಕ್ಕಾಗಿ ಮಂಗಳೂರಿನಲ್ಲಿದ್ದ ರಾಜು ತಾಳಿಕೋಟಿ ಅವರಿಗೆ ನಿನ್ನೆ ರಾತ್ರಿ ತೀವ್ರ ಹೃಯಾಘಾತ ಆಗಿತ್ತು. ತಕ್ಷಣ ಅವರನ್ನು ಮಂಗಳೂರು ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಸಂಜೆ ಆಸ್ತತ್ರೆಯಲ್ಲಿ ಅವರು ನಿಧನರಾದರು.
ನಾಳೆ ದಿನ ಅವರ (ಸ್ವಂತ ಊರು ತಾಳಿಕೋಟಿ) ಈಗಿನ ಊರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಅವರ ಪುತ್ರ ಭರತ ತಾಳಿಕೋಟಿ ಅವರು ತಿಳಿಸಿದ್ದಾರೆ.
ವರದಿ: ಸುಧೀರ್ ಕುಲಕರ್ಣಿ




