ಕಾಳಗಿ :ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನ ಗೊಳಿಸಿರುವ ಆರೋಪಿಯನ್ನು ಕೂಡಲೆ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕೆಂದು ಕಾಳಗಿಯಲ್ಲಿ ಪ್ರತಿಭಟನೆ ಮಾಡಲಾಯಿತು.
ಪಟ್ಟಣದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಕಾಳಗಿ ತಾಲೂಕಿನ ಕೂಲಿ ಸಮಾಜದ ವತಿಯಿಂದ ಶಹಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಕೆಲವು ಸಮಾಜಘಾತಕ ವ್ಯಕ್ತಿಗಳು, ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಅಕ್ಟೋಬರ್ 09 ರಂದು ರಾತ್ರಿ ಭಗ್ನಗೊಡಿಸುವುದನ್ನು ಖಂಡಿಸಿ ರಸ್ತೆ ತೊಡೆದು ಪ್ರತಿಭಟನೆ ಮಾಡಿದರು.ಹಳೆಯ ಬಸ್ ನಿಲ್ದಾಣದಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ಮೂಲಕ ಆಗಮಿಸಿ ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಟೈರ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿ ಆರೋಪಿಯನ್ನು ಬಂಧಿಸಿ ಕಾನೂನು ಅಡಿಯಲ್ಲಿ ಕಠಿಣ ಶಿಕ್ಷೆ ಯಾಗಬೇಕೆಂದು ಕಾಳಗಿ ತಸಿಲ್ದಾರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ರವಿರಾಜ ಕೊರವಿ ಅವರು ಮಾತನಾಡಿ ಮಹಾಪುರುಷರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗಿರುವುದಿಲ್ಲ.ಎಲ್ಲಾ ಸಮಾಜದವರು ಗೌರವಿಸುತ್ತಾರೆ.ಮುತ್ತಗಾ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಬಗ್ನಗೊಳಿಸುವುದನ್ನು ಭಾವನಾತ್ಮಕವಾಗಿ ಕೊಲಿ – ಕಬ್ಬಲಿಗ ಸಮಾಜಕ್ಕೆ ನೇರವಾಗಿ ದಾಳಿ ಮಾಡಿದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಅನ್ನಾಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿರುವ ಸಮಾಜಘಾತಕ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೆ ಜಿಲ್ಲಾ ಆಡಳಿತ ವತಿಯಿಂದ ಮುತ್ತಗಾ ಗ್ರಾಮದಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ನಿರ್ಮಾಣ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇಡೀ ಕಲ್ಯಾಣ ಕರ್ನಾಟಕ ಬಂದ್ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ಕೊಟ್ಟರು.
ಈ ಸಂದರ್ಭದಲ್ಲಿ ಭೀಮಣ್ಣ ಸಾಲಿ.ಲಕ್ಷಮಣ ಅವಂಟಿ.ರೇವಣಸಿದ್ದಪ್ಪ ಮುಕುರಂಭ.ಶಿವಕುಮಾರ ಕಮಕನೂರ್. ವಿಕ್ರಮ ನಾಮದರ.ಮಲ್ಲಿಕಾರ್ಜುನ ಮರಗುತ್ತಿ.ಜಗನ್ನಾಥ ತೇಲಿ.ಜಗಪ್ಪ ಚಂದನಕೇರಿ.ಪ್ರವೀಣ ನಾಮದಾರ.ವೇದ ಪ್ರಕಾಶ ಮೋಟಗಿ.ರಾಘವೇಂದ್ರ ಗುತ್ತೇದಾರ.ಪ್ರಶಾಂತ ಕದಂ.ರಮೇಶ ಕಿಟ್ಟದ.ಕಾಳಪ್ಪ ಕರೆಮನೋರ್. ಸಂತೋಷ ಕಡಬುರ್.ಬಾಬು ನಾಟಿಕಾರ್.ಶಿವರಾಯ ಕೋಯಿ.ದಯಾನಂದ ಹೊಸಮನಿ.ಪ್ರದೀಪ ಡೊಣುರ್.ರತ್ನಮ್ಮ ಡೊಣುರ್.ದೇವಿದ್ರಪ್ಪ ಸಲಹಳ್ಳಿ.ರವಿದಾಸ ಪತಂಗೆ.ಮಾರುತಿ ತೇಗಲತಿಪ್ಪಿ.ಶಾಮರಾವ ಕಡಬುರ್.ಪರಮಾನಂದ ಕಲಗೂರ್ತಿ. ಸೇರಿದಂತೆ ಕೋಲಿ ಸಮಾಜದ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ವರದಿ: ಹಣಮಂತ ಕುಡಹಳ್ಳಿ




