ರಾಯಚೂರು: ಸರಕಾರಿ ಸ್ಥಳದಲ್ಲಿ ಆರ್ ಆರ್ ಎಸ್ ಚಟುವಟಿಕೆಗಳನ್ನು ನಿಷೇಧ ಮಾಡುವಂತೆ ಸಚಿವ ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದಿರುವ ಪತ್ರ ಸಮಾಂಜವಾಗಿದ್ದು,ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ ಅವರು ಹೇಳಿದರು.
ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಆರ್ ಆರ್ ಎಸ್ ಈ ದೇಶದಲ್ಲಿ ಅನೇಕ ಕೋಮುಗಲಭೆ ಸೃಷ್ಟಿಗೆ ಕಾರಣವಾಗಿದೆ. ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕು ಎಂಬ ಅಜೆಂಡಾದಿಂದ ಆರ್ ಆರ್ ಎಸ್ ಸ್ಥಾಪನೆ ಆಗಿದೆ. ನೂರು ವರ್ಷ ಸಂಭ್ರಮಾಚರಣೆ ಮಾಡುತ್ತಿರುವ ಆರ್ ಎಸ್ ಎಸ್ ಕೊಡುಗೆ ಈ ದೇಶಕ್ಕೆ ಶೂನ್ಯ ಎಂದರು.
ಭಾರತ ಪ್ರಜಾಪ್ರಭುತ್ವ ದೇಶ ಇಲ್ಲಿ ಎಲ್ಲಾ ಸಮಾಜದವರ ಭಾವನೆ ಒಂದೇ. ಆದರೆ ಆರ್ ಎಸ್ ಎಸ್ ಮಾತ್ರ ಅನ್ಯ ಧರ್ಮದ ಹೆಸರಲ್ಲಿ ಸಮಾಜದ ಸ್ವಸ್ಥ ಹಾಳು ಮಾಡುತ್ತದೆ ಎಂದರು.
ಈ ದೇಶ ಸ್ವತಂತ್ರ ಹೋರಾಟದಲ್ಲಿ ಆರ್ ಆರ್ ಎಸ್ ಪಾತ್ರವೇನು? ಆರ್ ಎಸ್ ಎಸ್ ಈ ದೇಶದ ಯುವಜನತೆಯಲ್ಲಿ ವಿಷಬೀಜ ಬಿತ್ತುತ್ತಿದೆ. ಈ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ ಅಲ್ಲಿ ಆರ್ ಆರ್ ಎಸ್ ಸರಕಾರಿ ಸ್ಥಳದಲ್ಲಿ ನಿಷೇಧ ಮಾಡಿದೆ. ಪ್ರಿಯಾಂಕ ಖರ್ಗೆ ಅವರು ಬರೆದ ಪತ್ರ ಬಗ್ಗೆ ಬಿಜೆಪಿ ಪರಿಪೂರ್ಣವಾಗಿ ಅರಿತುಕೊಂಡು ಟೀಕೆ ಮಾಡಬೇಕು ಎಂದು ಕಿಡಿಕಾಡಿದರು.
ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಧಮ್ಮು ತಾಕತ್ತು ಇದ್ದಾರೆ ಆರ್ ಎಸ್ ಎಸ್ ನಿಷೇದ ಮಾಡುವಂತೆ ಹೇಳಿಕೆ ನೀಡಿರುವುದ್ದಾರೆ. 1948 ರಲ್ಲಿ ಸರದಾರ ವಲ್ಲಬಾಯಿ ಪಟೇಲ್, ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯಲ್ಲಿ ಆರ್ ಆರ್ ಎಸ್
ನಿಷೇಧ ಮಾಡಿದ್ದರು. ಈ ಬಗ್ಗೆ ಅವರು ಆರ್ ಆರ್ ಎಸ್ ಬಗ್ಗೆ ಆರ್ ಅಶೋಕ ಅವರು ಪರಾಮರ್ಶೆ ಮಾಡಿಕೊಳ್ಳಬೇಕೆಂದು ಎಂದು ಹೇಳಿದರು.
1969 ರಲ್ಲಿ ಕೋಮು ಗಲಭೆಗೆ,1971 ರಲ್ಲಿ ತಲಿಚೇರಿ ಗೋಮು ಗಲಭೆ, 1979 ಜೆಮ್ ಶೇಡ್ ಕೋಮು ಗಲಭೆ ಹಾಗೂ 1982 ಕನ್ಯಾಕುಮಾರಿನಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲೆ ನಡೆದ ಕೋಮುಗಲಭೆಯಲ್ಲಿ ಆರ್ ಆರ್ ಎಸ್ ಕಾರಣಿಭೂತಿಯಾಗಿದೆ ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಆರೋಪಿಸಿದರು.
ಆರ್ ಆರ್ ಎಸ್ 100 ವರ್ಷದ ಸಂಭ್ರಮದಲ್ಲಿ ಕೇವಲ ಇವರ ಸಾಧನೆ ಮಹಾತ್ಮ ಗಾಂಧಿ ಕೊಲೆ, ಬಾಬ್ರಿ ಮಸೀದಿ ಧ್ವಂಸ ಹಾಗೂ ಕೋಮುಗಲಭೆ ಸೃಷ್ಟಿಸುವುದು ಇವರ ನೂರು ವರ್ಷದ ಬಹುದೊಡ್ಡ ಸಾಧನೆಯ ಸಂಭ್ರಮ ಎಂದು ಟೀಕಿಸಿದರು.
ವರದಿ: ಗಾರಲ ದಿನ್ನಿ ವೀರನ ಗೌಡ




