ಸೇಡಂ: ತಾಲೂಕಿನ ಆಡಕಿ ಗ್ರಾಮದ ವಾರ್ಡ್ ನಂ-1ರಲ್ಲಿ ಶ್ರೀ ಹನುಮಾನ್ ದೇವಾಲಯ ಹಿಂದೆ ಸಾಯಿಲು ಮನೆಯಿಂದ ಹುಸೇನ್ ಬಲೆಗಾರ ಅವರ ಮನೆಯವರೆಗೆ ಚರಂಡಿ ನಿರ್ಮಾಣವಾಗಿದ್ದು, ಚರಂಡಿಯ ಕಾಮಗಾರಿ ಅಸ್ತವ್ಯಸ್ತವಾಗಿ ಮಾಡಿದ್ದೂ,ಅಲ್ಲೇ ಇರುವ ಶಾಲಾ ಮಕ್ಕಳಿಗೂ ಹಾಗೂ ಓಣಿಯಲ್ಲಿರುವ ಮಕ್ಕಳಿಗೆ ತಿರುಗಾಡಲು ತೊಂದರೆ ಯಾಗಿರುವದರಿಂದ ಅಲ್ಲಿರುವ ಪಾಲಕರು ಹಣ ಸಂಗ್ರಹಣೆ ಮಾಡಿ ಚರಂಡಿಯ ಗುಂಡಿಯನ್ನು ಮುಚ್ಚಲು ಕಲ್ಲು ಬಂಡೆಯನ್ನು ಹಾಕಿದ್ದಾರೆ.
ಅಧಿಕಾರಿಗಳು ಕಾಮಗಾರಿಯ ಕೆಲಸವನ್ನು ಸರಿಯಾಗಿ ಪರಿಶೀಲನೆ ಮಾಡಿರುವುದಿಲ್ಲ ಎಂದು ಲಕ್ಷ್ಮಜೀ ಕ್ಷಿರಸಾಗರ, ಹುಸೇನ್ ಬಲೆಗಾರ, ಶಾಮಪ್ಪ, ಸಾಯಿಲು ಇನ್ನಿತರರು ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕೆಂದು ಮೇಲಧಿಕಾರಿಗಳಿಗೆ ವಿಡಿಯೋ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




