Ad imageAd image

ಇನ್ಮುಂದೆ ದ್ವಿತೀಯ ಪಿಯುಸಿಯಲ್ಲಿ 600 ಕ್ಕೆ 198 ಅಂಕ ಪಡೆದರೆ ಪಾಸ್ : ಮಧು ಬಂಗಾರಪ್ಪ 

Bharath Vaibhav
ಇನ್ಮುಂದೆ ದ್ವಿತೀಯ ಪಿಯುಸಿಯಲ್ಲಿ 600 ಕ್ಕೆ 198 ಅಂಕ ಪಡೆದರೆ ಪಾಸ್ : ಮಧು ಬಂಗಾರಪ್ಪ 
Madhu bangaarappa
WhatsApp Group Join Now
Telegram Group Join Now

ಬೆಂಗಳೂರು : ಇನ್ಮುಂದೆ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು 600 ಕ್ಕೆ 198 ಅಂಕ ಪಡೆದರೆ ಪಾಸ್ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದರು.

ಕನಿಷ್ಠ 30 ಅಂಕ ಪಡೆಯುವುದು ಕಡ್ಡಾಯವಾಗಿದೆ ಲಿಖಿತ ಹಾಗೂ ಆಂತರಿಕ ಅಂಕ ಸೇರಿದಂತೆ 30 ಅಂಕ ಪಡೆದು 198 ಅಂಕ ಪಡೆದರೆ ಪಾಸ್ ಆಗಲಿದ್ದಾರೆ.

2025 ಮತ್ತು 26ನೇ ಸಾಲಿನಿಂದ ಪರೀಕ್ಷಾ ಪಾಸಿಂಗ್ ಅಂಕ ಕಡಿತ ಅಗಲಿದ್ದು, ಅದೇ ರೀತಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ. ಕೂಡ 625ಕ್ಕೆ ಕನಿಷ್ಠ 26 ಅಂಕ ಗಳಿಸಿದರೆ ವಿದ್ಯಾರ್ಥಿಗಳು ಪಾಸ್ ಆದಂತೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 30 ಅಂಕಗಳನ್ನು ಪಡೆಯಬೇಕು.

ಪಾಸಿಂಗ್ ಮಾರ್ಕ್ಸ್ ಕಡಿತ ವಿಚಾರವಾಗಿ ಪಬ್ಲಿಕ್ ಅಭಿಪ್ರಾಯ ಹಾಕಿದ್ದೆವು. ಶೇಕಡ 33 ರಷ್ಟು ಪರವಾಗಿ 701 ಪತ್ರಗಳು ಬಂದಿದ್ದವು. ಶೇಕಡ 35ರಷ್ಟು ಪರವಾಗಿ 8 ಪತ್ರಗಳು ಬಂದಿದ್ದವು.

ಹೀಗಾಗಿ 2025 ಮತ್ತು 26 ನೇ ಸಾಲಿನಿಂದ 33% ಜಾರಿಗೆ ತರುತ್ತಿದ್ದೇವೆ. 2025 ಮತ್ತು 26ನೇ ಸಾಲಿನಿಂದ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 33% ರಷ್ಟು ಅಂಕ ಪಡೆದರೆ ಪಾಸ್ ಎಂದು ಮಧು ಬಂಗಾರಪ್ಪ ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!