Ad imageAd image

ಔತಣಕೂಟಕ್ಕೂ ನಾಯಕತ್ವ ಬದಲಾವಣೆಗೂ ಯಾವುದೇ ರೀತಿ ಸಂಬಂಧ ಇಲ್ಲ : ಸಿದ್ದರಾಮಯ್ಯ 

Bharath Vaibhav
ಔತಣಕೂಟಕ್ಕೂ ನಾಯಕತ್ವ ಬದಲಾವಣೆಗೂ ಯಾವುದೇ ರೀತಿ ಸಂಬಂಧ ಇಲ್ಲ : ಸಿದ್ದರಾಮಯ್ಯ 
WhatsApp Group Join Now
Telegram Group Join Now

ಹಾಸನ : ರಾಜ್ಯ ರಾಜಕಾರಣದಲ್ಲಿ ನವೆಂಬರ್ ನಲ್ಲಿ ಭಾರಿ ದೊಡ್ಡ ಕ್ರಾಂತಿಯಾಗಲಿದೆ ಎಂದು ಗುಸು-ಗುಸು ಕೇಳಿ ಬರುತ್ತಿದೆ.

ಇದರ ಮಧ್ಯೆ ಸಂಪುಟ ಪುನರ್ ರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕ, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಇತ್ತೀಚಿಗೆ ಅವರು ಎಲ್ಲರಿಗೂ ಔತಣಕೂಟ ಏರ್ಪಡಿಸಿದ್ದರು.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಔತಣಕೂಟಕ್ಕೂ ನಾಯಕತ್ವ ಬದಲಾವಣೆಗೂ ಯಾವುದೇ ರೀತಿ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹಾಸನದಲ್ಲಿ ಮಾತನಾಡಿದ ಅವರು, ಡಿನ್ನರ್ ಪಾರ್ಟಿಗೂ ರಾಜಕೀಯಕ್ಕೂ ಯಾವುದೇ ರೀತಿ ಸಂಬಂಧ ಇಲ್ಲ. ಯಾವಾಗಲೂ ನಾವು ಸೇರುತ್ತೇವೆ ಪಕ್ಷದ ವಿಚಾರದ ಕುರಿತು ಚರ್ಚಿಸುತ್ತೇವೆ. ಆಗಾಗ ಊಟಕ್ಕೆ ಸೇರುತ್ತೇವೆ.

ಗೆಟ್ ಟುಗೆದರ್ ಮಾಡುತ್ತೇವೆ. ಹಾಗಾಗಿ ಔತಣ ಕೂಟಕ್ಕೂ ನಾಯಕತ್ವ ಬದಲಾವಣೆಗೆ ಯಾವುದೇ ರೀತಿಯಾದ ಸಂಬಂಧ ಇಲ್ಲ. ಹೈಕಮಾಂಡ್ ಬಿಹಾರ ಚುನಾವಣೆಯ ಬಗ್ಗೆ ಗಮನಹರಿಸಿದೆ ಹೈಕಮಾಂಡ್ ಏನು ಹೇಳುತ್ತದೆ ಹಾಗೆ ಮಾಡೋಣ ಎಂದು ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!