ಸಿಂಧನೂರು : ತಾಲೂಕಿನ ಅರಗಿನ ಮರ ಕ್ಯಾಂಪಿನ ಬಿಜೆಪಿ ಮುಖಂಡ ನಕ್ಕಂಟಿ ಮಲ್ಲಿಕಾರ್ಜುನ್ 2022 ರಲ್ಲಿ ಬಳ್ಳಾರಿ ಜಿಲ್ಲೆಯ ಜಾನಿಕುಂಟೆ ಗ್ರಾಮದಲ್ಲಿರುವ ಕೋರ ವೆಂಕಟರಾವ್ ಅನ್ನಪೂರ್ಣ ದಂಪತಿಗಳಿಗೆ ಸೇರಿದ 11 ಎಕರೆ 52 ಸೆನ್ಸ್ ಸರ್ವೆ ನಂಬರ್ 42. 43. 44 ಜಮೀನು ಪ್ರಸ್ತುತ ಸಿಂಧನೂರು ತಾಲೂಕಿನ ಶ್ರೀ ರಾಮನಗರ -ಜಂಗಮರ ಹಟ್ಟಿ ಎ 1, ಕ್ಯಾಂಪಿನಲ್ಲಿ ವಾಸವಾಗಿರುವ ಕೋರ ವೆಂಕಟರಾವ್ ಅನ್ನಪೂರ್ಣ ದಂಪತಿಗಳ ಹೆಸರಿನ ಜಮೀನು ಒಂದು ಎಕರೆಗೆ 16ಲಕ್ಷ 50 ಸಾವಿರದಂತೆ ಖರೀದಿಸಿದ ನೆಕ್ಕುಂಟಿ ಮಲ್ಲಿಕಾರ್ಜುನ್ ಅವರು ತಮ್ಮ ಹೆಸರಿಗೆ ಮತ್ತು ಹೆಂಡತಿ ಶ್ರೀಮತಿ ರಮ್ಯ ಅವರ ಹೆಸರಿಗೆ ಜಮೀನು ವರ್ಗಾವಣೆ ಮಾಡಿಕೊಂಡು.
ಖರೀದಿಸುವಾಗ 93 ಲಕ್ಷ 52,ಸಾವಿರ ಹಣ ಕೊಟ್ಟು ಇನ್ನುಳಿದ ಹಣವನ್ನು ಒಂದು ತಿಂಗಳೊಳಗೆ ಕೊಡುತ್ತೇನೆಂದು ನಂಬಿಸಿ ನೋಂದಣಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಸತಾಯಿಸಿ 54 ಲಕ್ಷ ಕೊಟ್ಟಿರುತ್ತಾನೆ ಇನ್ನುಳಿದ ಹಣ ಮೂರುವರೆ ವರ್ಷ ಗಳಾದರು ಹಣ ಕೊಡದೆ ಸತಾಯಿಸಿ ಬೆದರಿಕೆ ಆಗುತ್ತಾನೆ ಪೊಲೀಸ್ ಸ್ಟೇಷನ್ ಗೆ ದೂರ ನೀಡಿದರು, ಜನಪ್ರತಿನಿಧಿಗಳಲ್ಲಿನೆಕ್ಕಂಟಿಯಿಂದ ಹಣ ಕೊಡಿಸಿ ಎಂದು ಬೇಡಿಕೊಂಡರು ನಮಗೆ ಇನ್ನುವರೆಗೆ ನ್ಯಾಯ ಸಿಕ್ಕಿಲ್ಲ ಸಾಲದ ಸಲವಾಗಿ ನೆಕ್ಕಂಡಿಯವರಿಗೆ ಜಮೀನು ಮಾರಿದೆವು ಇನ್ನು 42 ಲಕ್ಷ 50, ಸಾವಿರ ರೂ ಹಣ ಕೊಡಬೇಕು ದಯವಿಟ್ಟು ನಮಗೆ ಹಣ ಕೊಡಿಸಿ ನ್ಯಾಯ ಒದಗಿಸಿ ಕೊಡಿ ಎಂದು ವಂಚನೆಗೆ ಒಳಗಾದ ವೃದ್ಧ ದಂಪತಿಗಳು ಕಣ್ಣೀರಾಕುತ್ತಿದ್ದಾರೆ ಪೊಲೀಸ್ ಇಲಾಖೆ ಮತ್ತು ಜನಪ್ರತಿನಿಧಿಗಳು ಈ ದಂಪತಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ
ವರದಿ:ಬಸವರಾಜ ಬುಕ್ಕನಹಟ್ಟಿ




