—–ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ವತಿಯಿಂದ ಕಾರ್ಯಕ್ರಮ
ಸೇಡಂ: ನಿವೃತ್ತ ಸರಕಾರಿ ನೌಕರರ ಸಂಘ ಸೇಡಂ ಮತ್ತು ವ್ಯಾಪಾರಸ್ಥರ ಸಂಘ ಸೇಡಂ. ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸೇಡಂ ಮತ್ತು ಚಿಂಚೋಳ್ಳಿ ತಾಲೂಕು ಇವರ ಸಹಯೋಗದೊಂದಿಗೆ ಪರಮಪೂಜ್ಯ ರಾಜರ್ಷಿ ಡಾ!! ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ. ವೀ. ಹೆಗ್ಗಡೆಯವರ ಕೃಪಾಶಿರ್ವಾದಗಳೊಂದಿಗೆ.

ಗಾಂಧೀಜಯಂತಿ ಸಂಭ್ರಮಾಚಾರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮೃತಿ ಮತ್ತು ಜನಜಾಗೃತಿ ಕಾರ್ಯಕ್ರಮ ಸಮಾವೇಶವನ್ನು ದಿನಾಂಕ:- 14/10/2025 ಸದ್ರಿ ಜಾತಾ ಕಾರ್ಯಕ್ರಮವನ್ನು ಆರಕ್ಷಕ ಉಪನಿರಿಕ್ಷಕರಾದ ಉಪೇಂದ್ರಕುಮಾರ್. ಆರ್ ಅವರು ಉದ್ಘಾಟನೆ ಮಾಡಿ ಚಾಲನೆ ನೀಡಿದರು.
ಈ ಜಾತಾದಲ್ಲಿ ಕಲಬುರಗಿ ಜಿಲ್ಲೆಯ ಮಾನ್ಯ ನಿರ್ದೇಶಕರು ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಮತ್ತು ಸ್ವಸಹಾಯ ಸಂಘದ ಸದಸ್ಯರು ಹಾಗೂ ಸೇಡಂ ಮತ್ತು ಚಿಂಚೋಳ್ಳಿ ತಾಲೂಕಿನ ಸಮಸ್ತ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಈ ಜಾತಾ ಕೊತ್ತಲ ಬಸವೇಶ್ವರ ದೇವಸ್ಥಾನದವರೆಗೆ ನಡೆಯಿತು.
ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಗಾಂಧಿಸ್ಮೃತಿ ಮತ್ತು ಜನಜಾಗೃತಿ ಸಮಾವೇಶ ಪ್ರಾರಂಭವಾಯಿತು ಚಿಂಚೋಳ್ಳಿ ತಾಲೂಕಿನ ಯೋಜನಾಧಿಕಾರಿಗಳು ನಿರೂಪಣೆ ಪ್ರಾರಂಭಿಸಿದರು.
ಸೇಡಂ ತಾಲೂಕಿನ ಯೋಜನಾಧಿಕಾರಿಗಳಾದ ಮಂಜುನಾಥ್. ಎಸ್. ಜಿ ಇವರು ವೇದಿಕೆಯಲ್ಲಿ ಆಸೀನರಾದ ಎಲ್ಲಾ ಗಣ್ಯಮಾನ್ಯರನ್ನು ಸ್ವಾಗತಿಸಿದರು.
ಪ್ರಾಸ್ತವಿಕವಾಗಿ ಕಲಬುರಗಿ ಜಿಲ್ಲೆಯ ನಿರ್ದೇಶಕರಾದ ಗಣಪತಿ ಮಾಳಂಜಿ ಅವರು ಗಾಂಧೀಸ್ಮೃತಿ ಕಾರ್ಯಕ್ರಮದ ಬಗ್ಗೆ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ, ಸ್ವಸಹಾಯ ಸಂಘದ ಪ್ರಯೋಜನದ ಬಗ್ಗೆ, ಯೋಜನೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗೌರವ ಉಪಸ್ಥಿತಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಸಿ. ಎನ್. ಬಾಬಳಗಾoವ್, ರಾಜಶೇಖರ ಶರಣಪ್ಪ ನಿಲಂಗಿ, ವರದಶಂಕರ ಸ್ವಾಮಿ ಹಿರೇಮಠ,ಕಾಶಪ್ಪ ಬಿ. ಪೂಜಾರಿ, ಶಿವಕುಮಾರ ವೀರಣ್ಣ ಜಾಡರ್, ಭಾಗ್ಯಲಕ್ಷ್ಮೀ ನಾಯಿಕೋಡಿ,ನರಸಾರೆಡ್ಡಿ ವೆಂಕಟರೆಡ್ಡಿ,ಸುರೇಶ ದೇಶಪಾಂಡೆ, ರೇವಣಸಿದ್ಧ ಪಡಶಟ್ಟಿ, ಮಾರುತಿ ಗಂಜಿಗೇರಿ, ಗೋಪಾಲ ಮಹದೇವಪ್ಪ. ಬಿ. ದಡ್ಡಿಮನಿ ಆರಕ್ಷಕ ವೃತ್ತ ನಿರೀಕ್ಷಕರು, ಸೇಡಂ.ಎಲ್ಲರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.
ಆರಕ್ಷಕ ವೃತ್ತ ನಿರೀಕ್ಷಕರು ಕಾನೂನಾತ್ಮಕ ವಿಚಾರಗಳ ಬಗ್ಗೆ, ಯೋಜನೆಯ ಕಾನೂನು ಅಡಿಯಲ್ಲಿ ಇರುವ ನಿಯಮಗಳ ಬಗ್ಗೆ, ಸದಸ್ಯರು ಕಾನೂನಿನ ತಿಳುವಳಿಕೆಯನ್ನು ಅರಿತುಕೊಂಡು ಉತ್ತಮ ರೀತಿಯಲ್ಲಿ ವ್ಯವಹಾರ ಮಾಡುವ ಬಗ್ಗೆ, ತಿಳಿಸದರು. ಯೋಜನೆಯ ಬಗ್ಗೆ ತಪ್ಪು ವಿಚಾರವನ್ನು ಇಟ್ಟುಕೊಳ್ಳದೆ ಸೂಕ್ತವಾದ ಯೋಚನೆಯನ್ನು ಅಳವಡಿಸಿಕೊಂಡು ಮುನ್ನಡೆಸುವ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಸಿ.ಎನ್.ಬಾಬಳಗಾಂವ್ ಅವರು ಯೋಜನೆಯ ಕಾರ್ಯಕ್ರಮಗಳಾದ
1️⃣ಮಾಶಾಸನ ಕಾರ್ಯಕ್ರಮ
2️⃣ಸುಜ್ಞಾನ ನಿಧಿ ಶಿಷ್ಯವೇತನ
3️⃣ಪ್ರಗತಿನಿಧಿ ಕಾರ್ಯಕ್ರಮ
4️⃣ಜ್ಞಾನವಿಕಾಸ ಕಾರ್ಯಕ್ರಮ
5️⃣ಗೆಳತಿ ಕಾರ್ಯಕ್ರಮ
6️⃣ವಾತ್ಸಲ್ಯ ಕಾರ್ಯಕ್ರಮ
7️⃣ ಪ್ರಗತಿಬಂಧು ಕಾರ್ಯಕ್ರಮ
ಇತರೆ ಕಾರ್ಯಕ್ರಮಗಳ ಬಗ್ಗೆಸವಿಸ್ತಾರವಾಗಿ ಸಭೆಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಗೌರವ ಅಧ್ಯಕ್ಷತೆಯನ್ನು ವಹಿಸಿದ ಶಿವಯ್ಯಸ್ವಾಮಿ. ಸಿದ್ದಯ್ಯಸ್ವಾಮಿ. ಬಿಬ್ಬಳ್ಳಿ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರು ಇವರಿಗೆ ಕಲಾತಪಸ್ವೀಯಾದ ಇವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿಕೊಂಡು ಎಲ್ಲಾ ಗಣ್ಯಮಾನ್ಯರ ಉಪಸ್ಥಿತಿಯಲ್ಲಿ ಗೌರವ ಸಮರ್ಪಣೆ ಮಾಡಲಾಯಿತು.
ಜನಜಾಗೃತಿ ವೇದಿಕೆ ಸದಸ್ಯರಾದ, ರಾಜಶೇಖರ. ನೀಲಂಗಿ ಅವರು ಧರ್ಮಸ್ಥಳ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ , ಸಂಘಕ್ಕೆ ಇರುವ ಬೆಲೆಯ ಬಗ್ಗೆ , ಅದರ ಉಪಯೋಗದ ಬಗ್ಗೆ , ನೀತಿ ಕಥೆಯನ್ನು ಹೇಳುವ ಮೂಲಕ ದುಡ್ಡಿನ ಬೆಲೆಯನ್ನು ತಿಳಿಸಿದರು. ವ್ಯವಹಾರ ಮಾಡಿ ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಎಂದು ತಿಳಿಸದರು.
ಶಿವಯ್ಯಸ್ವಾಮಿ. ಸಿದ್ದಯ್ಯಸ್ವಾಮಿ. ಬಿಬ್ಬಳ್ಳಿ ಅವರು ದುಶ್ಚಟ ಮುಕ್ತ ಸಮಾಜವನ್ನು ನಿರ್ಮಾಣ ಮಹಿಳೆಯರ ಕೈಯಲ್ಲಿದೆ. ಅವರು ಸಂಸಾರದ ಜವಾಬ್ದಾರಿಯನ್ನು ಹೊತ್ತು ಗಂಡಂದಿರು ಮದ್ಯ ವ್ಯಾಸನಕ್ಕೆ ದಾಸರಾಗದಂತೆ ನೋಡಿಕೊಳ್ಳುವುದು. ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಪ್ರಬಲರಾಗಬೇಕೆಂದು ತಿಳಿಸಿದರು.
ಸಾನಿಧ್ಯವನ್ನು ವಹಿಸಿದ ಪಂಚಾಕ್ಷರಿ ಮಹಾಸ್ವಾಮಿಗಳು, ಹಾಲಪ್ಪಯ್ಯ ವಿರಕ್ತ ಮಠ ಸೇಡಂ ಶ್ರೀಗಳು ಧರ್ಮಸ್ಥಳ ಸಂಸ್ಥೆಯ ಧರ್ಮ ಕಾರ್ಯ ಇದು ಧರ್ಮದ ಕೆಲಸವಾಗಿದೆ. ಇದನ್ನು ಧರ್ಮೋತ್ತಾನದ ಉದ್ದೇಶದಿಂದ ಸಮಾಜದ ಉದ್ಧಾರವನ್ನು ಮಾಡುವಂತ ಕೆಲಸವಾಗುತ್ತಿದೆ. ಇದನ್ನ ಗ್ರಾಮೀಣ ಮಹಿಳೆಯರು ಸದುಪಯೋಗಿಸಿ ಉನ್ನತೀಕರಣ ಹೊಂದಬೇಕೆಂದು ಆಶೀರ್ವಚನ ನೀಡಿದರು.
ಕೊನೆಯದಾಗಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಸುರೇಶ ದೇಶಪಾಂಡೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯಮಾನ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




