Ad imageAd image

ವಕೀಲರಾದ ರಾಕೇಶ್ ಕಿಶೋರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

Bharath Vaibhav
ವಕೀಲರಾದ ರಾಕೇಶ್ ಕಿಶೋರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ
WhatsApp Group Join Now
Telegram Group Join Now

ಗೋಕಾಕ: ದಿನಾಂಕ 6-10-2025 ರಂದು ಒಂದು ಪ್ರಕರಣದ ಕುರಿತು ಬಿ.ಆರ.ಗವಾಯಿ ಅವರು ವಿಚಾರಣೆ ನಡೆಸುತ್ತಿದ್ದ ವೇಳೆ ನ್ಯಾಯಲಯದ ಹಾಲ ನಲ್ಲೇ ಇದ್ದ ವಕೀಲನಾದ ರಾಕೇಶ ಕಿಶೋರ ಈತನು ಶೂ ತೆಗೆದುಕೊಂಡು ನೆರವಾಗಿ ಮುಖ್ಯ ನ್ಯಾಯಮೂರ್ತಿಗಳ ಪೀಠದತ್ತ ಎಸೆದಿದ್ದ ಆತನನ್ನು ಬಂದಿಸಿ ಬೇಕೆಂದು ಕರ್ನಾಟಕ ಭೀಮ ರಕ್ಷಕ ಸಂಘಟನೆ ಹಾಗು ವಿವಿದ ದಲಿತ ಪರ ಸಂಘಟನೆಗಳು ಗೋಕಾಕದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಭಾರಿ ಪ್ರತಿಬಟನೆ ಮಾಡಿದರು.

ಪ್ರತಿಬಟನೆಯಲ್ಲಿ ರಾಕೇಶ ಕಿಶೋರ ವಕೀಲನ ವಿರುದ್ದ ದಿಕ್ಕಾರ ಕೂಗಿ ರಸ್ತೆ ತಡೆದು ಪ್ರತಿಬಟನೆ ಮಾಡಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ಥವಾಗಿತ್ತು.

ಪ್ರತಿಬಟನೆಯಲ್ಲಿ ಕರ್ನಾಟಕ ಭೀಮ ರಕ್ಷಕ ಸಂಘಟನೆ ರಾಜ್ಯ ಅಧ್ಯಕ್ಷರಾದ ಈಶ್ವರ ಗುಡಜ ಇವರು ನ್ಯಾಯಲಯ ಅನ್ನುವುದು ದೇವರು ಇದ್ದ ಹಾಗೆ ಭಾರತದಲ್ಲಿ ಸಾವಿರಾರು ವಕೀಲರು ಇದ್ದಾರೆ ಅವರು ನೋಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಾರೆ ಆದರೆ ರಾಕೇಶ ಕಿಶೋರ ಎಂಬ ವ್ಯೇಕ್ತೀ ವಕೀಲ ಆಗಲು ಲೈಕ ಇಲ್ಲ ಭಾರತದ ನ್ಯಾಯಪೀಠದಲ್ಲಿ ಕುಳಿತವರು ದೇವರು ಇದ್ದ ಹಾಗೆ ನ್ಯಾಯಲಯದ ಮೇಲೆ ನಾಯ್ಯಧಿಶರ ಮೇಲೆ ಶೂ ಏಸೇದೀದ್ದು ಯಾವದೇ ಕಾರಣಕ್ಕೂ ನಾವು ಸಹೀಸಲ್ಲ ನಾವು ಹಿಂದೂಗಳೆ ಭಾರತ ದೇಶ ಸರ್ವಜನಾಂಗಗಳ ದೇಶ ಈ ದೇಶದಲ್ಲಿ ನ್ಯಾಯಲಾಯಕ್ಕೆ ಎಲ್ಲರು ತಲೇ ಭಾಗಲೇ ಬೇಕು ಇನ್ನು ನಮ್ಮಲ್ಲಿ ಕ್ರೈಸ್ತರಿಗೆ ಭೈಬಲ ಗ್ರಂಥ ಆಗಿರಬಹುದು ಮುಸಲ್ಮಾನರಿಗೆ ಕುರಾನ ಗ್ರಂಥ ಆಗಿರಬಹುದು ಹಿಂದೂಗಳಿಗೆ ಭಗವತ ಗೀತೆ ಗ್ರಂಥ ಆಗಿರ ಬಹುದು ಆದರೆ ಎಲ್ಲರಿಗೂ ಇಡೀ ದೇಶಕ್ಕೆ ಒಂದೆ ಒಂದು ಗ್ರಂಥ ಅಂದ್ರೆ ಅದು ಸಂವಿಧಾನ ಅಂದರು ಇನ್ನು ಹಿಂತಾ ಪ್ರಕರಣಗಳು ಮರುಕಳಿಸದಂತೆ ನಿಗಾ ವಹಿಸಿಬೇಕೆಂದು ಆತನನ್ನು ಕೂಡಲೆ ಆತನ ವಿರುದ್ದ ಸಂಬಂದಪಟ್ಟು ಅಧಿಕಾರಿಗಳು ಸುಮುಟೊ ಕೇಸ್ ದಾಖಲಿಸಿಕೊಳ್ಳಬೇಕು ಹಾಗು ಆತನನ್ನು ಬಂದಿಸ ಬೇಕೆಂದು ಒತ್ತಾಯಿಸಿದರು.

ನಂತರ ಬಸವೇಶ್ವರ ವೃತ್ತದಿಂದ ಆಡಳಿತ ಸೌದದವರೆಗೆ ಪಾದಯಾತ್ರೆ ಮಾಡುವ ಮೂಲಕ ರಾಕೇಶ ಕಿಶೋರನ ವಿರುದ್ದ ದಿಕ್ಕಾರ ಕೂಗುತ್ತಾ ತೆರಳಿ ತಹಶಿಲ್ದಾರ ಮುಖಾಂತರ ಭಾರತದ ರಾಷ್ಟ್ರಪತಿಗಳಿಗೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಮನವಿ ಮೂಲಕ ಒತ್ತಾಯಿಸಿದರು. ಯಾವುದೆ ಅಹಿತಕರ ಘಟನೆ ನಡೆಯದಂತೆ ಪೋಲಿಸರು ಸ್ಥಳದಲ್ಲಿ ಉಪಸ್ಥಿತರಿದ್ದರು.

ದಲಿತ ಮುಖಂಡ ಪ್ರಶಾಂತ ಪಾತ್ರುಟ ಕರ್ನಾಟಕ ಭೀಮ ರಕ್ಷಕ ಸಂಘಟನೆ ಬೆಳಗಾವಿಯ ಯುವ ಘಟಕದ ಅಧ್ಯಕ್ಷರು ಮುದಲಿಂಗ ಗೋರಬಾಳ ವಿಠಲ ಸಣಕ್ಕೀ.ಕೃಷ್ಣಾ ಗಂಡವಗೋಳ.ಗೋವಿಂದ ಕಳ್ಳಿಮನಿ ಚಿದಾನಂದ ತಳವಾರ ರವೀಂದ್ರ ದಾನವಗೋಳ.ಉಮೇಶ ಹರಿಜನ.ಆಕಾಶ ಕಡಕೋಳ ಸುನಿತಾ ಕೋಣ್ಣೂರ.ಲಕ್ಷ್ಮೀ ಮಾದರ.ಕಿರಣ..ಶೀವಾಳೆ ಶೆಟ್ಟೆಪ್ಪಾ ಮೇಸ್ತ್ರಿ ಹನಮಂತ ಮೇಸ್ತ್ರೀ.ಭಿಮಶಿ ಗಾಡಿವಡ್ಡರ.ಬಸು ಭಜ0ತ್ರಿ.ಯಲಪ್ಪ ದುರದುಂಡಿ.ರಘು ಗಸ್ತೀ.ಜಾಕೀರ.ಸುಹಾನ. ಸೇರಿದಂತೆ ಇನ್ನೂಳಿದ ದಲಿತ ಮುಖಂಡರು ಬಾಗಿಯಾಗಿದ್ದರು.

ವರದಿ: ಶಿವಾಜಿ ಎನ್ ಬಾಲೆಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!