ಸೇಡಂ : ತಾಲೂಕಿನ ತೊಲಮಾಮಿಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ದಿನನಿತ್ಯ ನೀರು, ಮತ್ತು ಇನ್ನಿತರ ಮುಳ್ಳು ತಂಟೆ ಬೆಳೆದು ಸ್ವಚತೆ ಇಲ್ಲದಂತಾಗಿದೆ.
ಕಾರಣ ತಾವು ಶಾಲೆಗೆ ಭೇಟಿನೀಡಿ ಪರಿಶೀಲನೆ ನಡೆಸಿ ಸ್ವಚತೆ ಕಾಪಾಡುವಂತೆ ಮನವರಿಕೆ ಮಾಡಬೇಕು ಹಾಗೂ ಶಾಲೆಯ ಮುಂಭಾಗದ ರಸ್ತೆಯನ್ನು ಸುಧಾರಿಸಬೇಕು ಎಂದು ಅಂಬೇಡ್ಕರ್ ಯುವ ಸೇನೆ ಮುಧೋಳ ವಲಯ ಅಧ್ಯಕ್ಷರಾದ ನರೇಶ್ ಎ ನಾಟಿಕರ್ ಮತ್ತು ಉಪಾಧ್ಯಕ್ಷರಾದ ಕೈಲಾಶ್ ಮೌರ್ಯ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರುತಿ ಹುಜುರಾತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




