ಕಾಗವಾಡ: ಕಿತ್ತೂರ ಉತ್ಸವದ 2025 ಅಂಗವಾಗಿ ಕಿತ್ತುರು ವಿಜಯ ಜ್ಯೋತಿಯನ್ನು ತಾಲೂಕಾಡಳಿತವತಿಯಿಂದ ಗುರುವಾರ ಮಧ್ಯಾಹ್ನ ಬರಮಾಡಿಕೊಳ್ಳಲಾಯಿತು. ಭವ್ಯಜ್ಯೋತಿಗೆ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕಾಧಿಕಾರಿ ವೀರಣ್ಣ ವಾಲಿ ಹಾಗೂ ತಹಶೀಲ್ದಾರ ರವೀಂದ್ರ ಹಾದಿಮನಿ ಭವ್ಯ ಜ್ಯೋತಿಗೆ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಮಾತನಾಡಿದ ತಹಶೀಲ್ದಾರ ರವೀಂದ್ರ ಹಾದಿಮನಿ ಕಿತ್ತೂರು ವಿಜಯಜ್ಯೋತಿಯನ್ನು ಭವ್ಯವಾಗಿ ಅಥಣಿ ಮಾರ್ಗವಾಗಿ ಸ್ವಾಗತಿಸಿ ಅದ್ದೂರಿಯಿಂದ ಬಿಳ್ಕೋಡಗೆ ನೀಡಲಾಯಿತು ಎಂದು ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಸಮಯದಲ್ಲಿ ಗ್ರೇಡ- 2 ತಹಶೀಲ್ದಾರ ರಶ್ಮೀ ಜಕಾತಿ, ಪಿಎಸ್ಐ ರಾಘವೇಂದ್ರ ಖೋತ, ಸಿಡಿಪಿಓ. ರವೀಂದ್ರ ಗುದಗೇನ್ನವರ, ಕ್ಷೇತ್ರಶಿಕ್ಷಣಾಧಿಕಾರಿ ಪಿ.ಬಿ ಮಧಬಾವಿ, ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ. ಕೆ ಕೆ ಗಾವಡೆ,ಕೆ ಕೆ ಕುಲಕರ್ಣಿ, ಕರವೇ ಅಧ್ಯಕ್ಷರಾದ ಸಿದ್ದುಒಡೆಯರ್, ಕಿತ್ತೂರು ಕರ್ನಾಟಕ ಸೇನೆ ಬೆಳಗಾವಿಯ ಜಿಲ್ಲಾ ಉಪಾಧ್ಯಕ್ಷರು ಸಾವಾಕರ,ತಾಲೂಕಾಧ್ಯಕ್ಷ ರವಿ ಪಾಟೀಲ,ಜಯ ಕರ್ನಾಟಕದ ತಾಲೂಕಾಧ್ಯಕ್ಷ ಬಸವರಾಜ ಮಗದುಮ್ಮ, ವಿನೋದ ಕಾಂಬಳೆ, ಸಚೀನ ಗಾವಡೆ, ಬಾಬಾಸಾಬ ಕೊಟ್ಟಲಗಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ:ಚಂದ್ರಕಾಂತ ಕಾಂಬಳೆ




