ಲಿಂಗಸ್ಗೂರು : ಹಟ್ಟಿ 2024- 25 ನೇ ಸಾಲಿನ ಹಣಕಾಸು ಉಳಿತಾಯ ಅನುದಾನದಲ್ಲಿ ಹಟ್ಟಿ ಪಟ್ಟಣ ವಾರ್ಡ್ ನಂಬರ್ 11 ರಾಯಚೂರು ಮುಖ್ಯ ರಸ್ತೆ ಜತ್ತಿ ಕಾಲೋನಿ ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ಪೈಭವನ ಪಕ್ಕದಲ್ಲಿರುವ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು
ಸರ್ಕಾರದ ನೇಮಗಳಂತೆ ಯಾವುದೇ ಕಾಮಗಾರಿಯನ್ನು ಕೈಗೊಳ್ಳುವ ಮುಂಚೆ ಸಂಬಂಧಪಟ್ಟ ಇಲಾಖೆಯಿಂದ ಕ್ರಿಯಯೋಜನೆ ತಯಾರಿಸಿ ಅನುಮೋದನೆ ಪಡೆದು ಟೆಂಡರ್ ಪ್ರಕಟಣೆಯಲ್ಲಿ ಹೊರಡಿಸಿ ಅರ್ಹ ಗುತ್ತಿಗೆದಾರರೊಂದಿಗೆ ಗುತ್ತಿಗೆ ಒಪ್ಪಂದ ಮಾಡಿಕೊಂಡು ಕಾಮಗಾರಿ ಪ್ರಾರಂಭಿಸಬೇಕು.
ಈ ಎಲ್ಲಾ ಸರ್ಕಾರದ ನಿಯಮಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿ ಗಾಳಿಗೆ ತೂರಿ ಹಟ್ಟಿ ಪಟ್ಟಣ ಪಂಚಾಯತಿಯ 2024- 25 ನೇ ಸಾಲಿನ ಉಳಿತಾಯ ಖಾತೆಯ ಹಣ ದಲ್ಲಿ ಕಾಮಗಾರಿಯ ಅಂದಾಜು ಪಟ್ಟಿಯನ್ನು ನಿರ್ಮಾಣ ಮಾಡದೆ ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಈ ಕಾಮಗಾರಿಯನ್ನು ಮಾಡಿರುತ್ತಾರೆ.
ಸಂಪೂರ್ಣ ರಸ್ತೆಯು ಕಳಪೆ ಕಾಮಗಾರಿಯಿಂದ ಕೂಡಿದ್ದು ಕಾಮಗಾರಿಗೆ ಸಂಬಂಧಿಸಿದಂತೆ ರಸ್ತೆ ನಿರ್ಮಾಣದಲ್ಲಿ ಸರಿಯಾಗಿ 8 ಇಂಚು ಅರ್ಥ್ ವರ್ಕ್ ಮಾಡಿರುವುದಿಲ್ಲ, ಆರು ಇಂಚು ಮರಂ ಹಾಕಿ ರೂಲ್ ರೋಲರ್ ಒಡೆದಿರುವುದಿಲ್ಲ,
ಅಂದಾಜು ಪಟ್ಟಿಯಲ್ಲಿ 6 ಇಂಚು 20 ಎಂ ಎಂ ವೇಟ್ ಮಿಕ್ಸಿಂಗ್ ರೂಲಿಂಗ್ ಕೆಲಸ ಮಾಡಬೇಕು ಆದರೆ ಗುತ್ತಿಗೆದಾರರು ಕೇವಲ ನಾಲ್ಕು ಇಂಚು ಕೆಲಸ ಮಾಡಿರುತ್ತಾರೆ, ಗುತ್ತಿಗೆದಾರ ನಿರ್ಮಿಸಿದ ಡಾಂಬರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದು,ರಸ್ತೆ ನಿರ್ಮಾಣ ಮಾಡಿದ ಒಂದು ವಾರದಲ್ಲಿ ಗುಂಡಿ ಬಿದ್ದು ರಸ್ತೆ ಮೇಲೆ ಹಾಕಿರುವ ಡಾಂಬರ್ ಕಳಪೆ ಗುಣಮಟ್ಟದಾಗಿರುವುದರಿಂದ ಕಿತ್ತು ಹೋಗಿರುತ್ತದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರನಿಗೆ ಯಾವುದೇ ರೀತಿಯ ಬಿಲ್ ಪಾವತಿ ಮಾಡಬಾರದೆಂದು, ಕಳಪೆ ಪ್ರಮಾಣದ ರಸ್ತೆ ನಿರ್ಮಾಣ ಮಾಡಿದ ಗುತ್ತೇದಾರನ ಹೆಸರನ್ನು ಬ್ಲಾಕ್ ಲಿಸ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘ ಸಮಿತಿ ನಗರ ಘಟಕ ಸಂಚಲಕರಾದ ಯಲ್ಲಪ್ಪ ಮಾಚನೂರು, ಪ್ರಶಾಂತ್ ದೀನ ಸಮುದ್ರ, ಶಾನ್ ವಾಚ್, ಶ್ರೀಮಂತ, ನಿಂಗರಾಜ್, ಸಾಜನ್ ಸೇರಿ ಹಟ್ಟಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗೆ ಮನವಿ ಸಲ್ಲಿಸಿದರು ಕಳಪೆ ರಸ್ತೆ ನಿರ್ಮಾಣ ಮಾಡಿದ ಗುತ್ತೇದಾರನಿಗೆ ಬಿಲ್ ತಡೆಹಿಡಿಯಬೇಕು ಮತ್ತು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ವರದಿ : ಶ್ರೀನಿವಾಸ ಮಧುಶ್ರೀ




