ರಾಜಕೋಟ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಮೊದಲ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ಸೌರಾಷ್ಟ್ರ ಎದುರಾಗಿದ್ದು, ಪಂದ್ಯದ ಮೂರನೇ ದಿನ ಸೌರಾಷ್ಟ್ರ ಮೊದಲ ಅವಧಿಯ ಆಟದಲ್ಲಿ 5 ವಿಕೆಟ್ ಗೆ 264 ರನ್ ಗಳಿಸಿದ್ದು, ಉಭಯ ತಂಡಗಳು ಮೊದಲ ಇನ್ನಿಂಗ್ಸ್ ಮುನ್ನಡೆಗೆ ಯತ್ನಿಸುತ್ತಿವೆ.
ಇಲ್ಲಿನ ನಿರಂಜನ್ ಶಹಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 372 ರನ್ ಗಳಿಸಿತ್ತು. ಸೌರಾಷ್ಟ್ರ ಇನ್ನಿಂಗ್ಸ್ ಮುನ್ನಡೆಗೆ 108 ರನ್ ಗಳಿಸಬೇಕಿದ್ದು, ಕರ್ನಾಟಕ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಲು ಸೌರಾಷ್ಟ್ರದ ಇನ್ನುಳಿದ 5 ವಿಕೆಟ್ ಗಳನ್ನು 108 ರನ್ ಗಳೊಳಗಾಗಿ ಔಟ್ ಮಾಡಬೇಕಿದೆ. ಕರ್ನಾಟಕದ ಪರವಾಗಿ ಅನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ 77 ಕ್ಕೆ 4 ವಿಕೆಟ್ ಪಡೆದರು. ಮೊಹಸಿನ್ ಖಾನ್ 1 ವಿಕೆಟ್ ಉರುಳಿಸಿದರು.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 372
ಸೌರಾಷ್ಟ್ರ ಮೊದಲ ಇನ್ನಿಂಗ್ಸ್ 5 ವಿಕೆಟ್ ಗೆ 264
ಚಿರಾಗ್ ಜಾನಿ 90 (148 ಎಸೆತ, 11 ಬೌಂಡರಿ, 1 ಸಿಕ್ಸರ್)
ಅರ್ಪಿತ ವಸವದಾ ಬ್ಯಾಟಿಂಗ್ 44 ( 98 ಎಸೆತ, 2 ಬೌಂಡರಿ, 1 ಸಿಕ್ಸರ್)
ಶ್ರೇಯಸ್ ಗೋಪಾಲ್ 77 ಕ್ಕೆ 1)




