Ad imageAd image

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಸಹಾಯಕರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ

Bharath Vaibhav
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಸಹಾಯಕರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ
WhatsApp Group Join Now
Telegram Group Join Now

ನಿಪ್ಪಾಣಿ :ತಾಲೂಕಿನ ನಿಪ್ಪಾಣಿ ಪಟ್ಟಣದ ಸಂಭಾಜಿ ನಗರದ ನಿವಾಸಿಯಾಗಿರುವ ಬುದ್ಧವ್ವಾ ಬುರ್ಲಿ ಎಂಬ ನಿರ್ಗತಿಕ ಮಹಿಳೆಗೆ ಕಳೆದ 5 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಸಿಕ 1000 ನಿರ್ಗತಿಕ ಮಾಶಾಸನ ಪಡೆದುಕೊಳ್ಳುತ್ತಿದ್ದು ಈ ಮಹಿಳೆಗೆ ವಾಸಿಸಲು ಸರಿಯಾಗಿ ಮನೆ ಇಲ್ಲದ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪೂಜ್ಯ ವೀರೇಂದ್ರ ಹೆಗ್ಗೆಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಂತೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಸುಮಾರು 175,000 ವೆಚ್ಚದಲ್ಲಿ ವಾತ್ಸಲ್ಯ ಮನೆ ನಿರ್ಮಾಣವನ್ನು ಮಾಡಿ ಫಲಾನುಭವಿಗೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಶೌಕತ್ ಮನೆರ ರವರು ಭಾಗವಹಿಸಿ ವೃದ್ಧ ಫಲಾನುಭವಿಗೆ ಮನೆ ಹಸ್ತಾಂತರ ಮಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಚಿಕ್ಕೋಡಿಯ ಜಿಲ್ಲಾ ನಿರ್ದೇಶಕರಾದ ಶ್ರೀ ವಿಟ್ಟಲ್ ಸಾಲಿಯನ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಳೆದ 16 ವರ್ಷಗಳಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಈ ಒಂದು ಭಾಗದಲ್ಲಿ ಸೇವೆಯನ್ನ ಮಾಡುತ್ತಿದ್ದು ಸಮಾಜಕ್ಕೆ ಉಪಯುಕ್ತ ವಾಗುವಂತಹ ಅನೇಕ ಕಾರ್ಯಕ್ರಮಗಳನ್ನ ಇವತ್ತು ಸಂಸ್ಥೆ ನೀಡುತ್ತಿದೆ ಸ್ವಸಹಾಯ ಸಂಘಗಳನ್ನ ಕಟ್ಟಿಕೊಂಡು ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡಬೇಕೆಂಬ ದೃಷ್ಟಿಯಿಂದ ಬ್ಯಾಂಕ್ ಆಫ್ ಮಹಾರಾಷ್ಟ್ರ ಮೂಲಕ ಅವರಿಗೆ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಹಾಗೂ ಅಸಹಾಯಕರಿಗೆ ನೆರವು ನೀಡಲು ಸಂಸ್ಥೆಯು ಬದ್ಧವಾಗಿದ್ದು ರಾಜ್ಯದಲ್ಲಿ ಸುಮಾರು 21,000 ಫಲಾನುಭವಿಗಳನ್ನು ಆಯ್ಕೆ ಮಾಡಿ ಪ್ರತಿ ತಿಂಗಳ ರೂ.1,000 ದಿಂದ 3 ಸಾವಿರದವರೆಗೆ ನಿರ್ಗತಿಕ ಮಾಶಾಸನವನ್ನು ನೀಡಲಾಗುತ್ತಿದೆ.

ಅದರಲ್ಲೂ ವಾಸಿಸಲು ಸರಿಯಾದ ಮನೆ ಇಲ್ಲದ ಫಲಾನುಭವಿಗಳಿಗೆ ವಾತ್ಸಲ್ಯ ಕಾರ್ಯಕ್ರಮದ ಮೂಲಕ ಅವರಿಗೆ ಮನೆಯನ್ನು ನಿರ್ಮಾಣ ಮಾಡಿಕೊಡಲಾಗುತ್ತಿದೆ ಅದರಲ್ಲೂ ರಾಜ್ಯದಲ್ಲಿ ಸುಮಾರು 666 ಮನೆಗಳನ್ನು ಈಗಾಗಲೇ ಹಸ್ತಾಂತರ ಮಾಡಲಾಗಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಮಂಜುನಾಥ ಎಚ್ ಜನಜಾಗೃತಿ ವೇದಿಕೆ ಸದಸ್ಯರಾದ ಮಹದೇವ್ ಬರಗಾಲೆ ಜ್ಞಾನ ವಿಕಾಸ ಸಮನ್ವಯಧಿಕಾರಿ ಕು.ಪಾರ್ವತಿ ವಲಯದ ಮೇಲ್ವಿಚಾರಕಿ ಶ್ರೀಮತಿ ಶ್ರೀದೇವಿ ಪಾಟೀಲ್ ಒಕ್ಕೂಟದ ಅಧ್ಯಕ್ಷರು ಮಾಲನ್ ಚೌಗುಲೆ ಒಕ್ಕೂಟದ ಪದಾಧಿಕಾರಿಗಳು ಸೇವಾಪ್ರತಿನಿಧಿಗಳು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

ವರದಿ :ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!