ಹುಬ್ಬಳ್ಳಿ: ಸರ್ಕಾರ ನಡೆಸುವವರಿಗೆ ವಿನಮೃತೆ ಇರಬೇಕು , ಸಿಎಂ ಸಿದ್ದರಾಮಯ್ಯ ಅವರು ನೀವು ನಿಮ್ಮ ಸಂಪುಟದ ಸಚಿವರು ಅಹಂಕಾರದಿಂದ ಮಾತನಾಡಬೇಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ತಿಳಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಹಂಕಾರದಿಂದ ಮಾತು ಆಡಿದರೆ ರಾಜ್ಯ ಹಿಂದೆ ಉಳಿಯುತ್ತದೆ. ೧.೩೦ ಲಕ್ಷ ಕೋಡಿಯ ಗೂಗಲ್ ಇನ್ವಸ್ಟ್ ಮೆಂಟ್ ಹೋಯ್ತು, ಬಹುತೇಕ ರಾಜ್ಯಗಳಲ್ಲಿ ಆರೋಗ್ಯಕರ ಸ್ಪರ್ಧೆಯಿದೆ. ಓಡಿಸ್ಸಾದಲ್ಲಿ ಮೂರು ಲಕ್ಷ ಕೋಟಿ ಹೂಡಿಕೆ ಆಯ್ತು ಆಯ್ತು ಇವರು ಸೌಜನ್ಯದಿಂದ ವರ್ತಿಸುವುದನ್ನು ಕಲಿಯಬೇಕು.
ಸರಿಯಾದ ನಿರ್ಧಾರ ತಗೆದುಕೊಂಡು ನಮ್ಮ ಸರ್ಕಾರದಲ್ಲಿ ತಗೆದುಕೊಳ್ಳಲಾಗಿದೆ. ಆದರೆ ಈ ಸರ್ಕಾರ ಅಹಂಕಾರದ ಮಾತು ಆಡಿದರೆ ರಾಜ್ಯ ಹಿಂದೆ ಉಳಿಯುತ್ತದೆ.
ಟು ಟೈಯರ್ ಸಿಟಿಗಳಲ್ಲಿ ಕೆಲವೊಂದು ಕನಸಿಯೇಷನ್ ಕೊಡಬೇಕು. ಹೆಚ್ಚು ಉದ್ಯಮಗಳು ಬರುತ್ತವೆ ಆದರೆ ಅಪ್ರೋಚ್ ಸರಿಯಾಗಿರಬೇಕು ಎಂದರು.
ರಾಜ್ಯ ಸರ್ಕಾರ ದಿವಾಳಿ ಎದ್ದಿದೆ ವಾಟರ್ ಮ್ಯಾನ್ ಗಳಿಗೆ ವೇತನ ಇವರಿಗೆ ವೇತನ ಕೊಡಲು ಆಗುತ್ತಿಲ್ಲ. ಡಿಸಿಎಂ ಅವರು ಇರೋರು ಇರಲಿ ಹೋಗುವವರು ಹೋಗಲಿ ಎನ್ನುತ್ತಾರೆ ಇದ್ಯಾವ ಮಾತು ಎಂದು ದೂರಿದ ಅವರು ಕಮೀಷನ್ ಹೆಚ್ಚಾಗಿದೆ ಸರ್ಕಾರ ವೈಫಲ್ಯಾವಾಗಿದೆ. ಬೇಜಾವ್ದಾರಿ ಪರಮಾವಧಿಯಾಗಿದೆ ಕರ್ನಾಟಕ ೨೦ ವರ್ಷ ಹಿಂದೆ ಹೋಗಲಿದೆ ಎಂದು ವಾಗ್ದಾಳಿ ನಡೆಸಿದರು.
ಚಿತ್ತಾಪುರದಲ್ಲಿ ಆರ್.ಎಸ್ಎಸ್ ಪಥಸಂಚಲನ ನಿರಾಕರಣೆ ಹಿನ್ನೆಲೆಯಲ್ಲಿ ಸರ್ಕಾರ ಉದ್ದೇಶಪೂರ್ವಕವಾಗಿ ವಿಫಲತೆ ಮುಚ್ಚಿಕೊಳ್ಳುವ ನಿಟ್ಟಿನಲ್ಲಿ ಬೇಕಂತಲ್ಲೆ ಮಾಡುತ್ತಿದೆ. ಸಂಘ ಆರಂಭ ಆದಾಗಿನಿಂದ ಪಥ ಸಂಚಲನ ನಡೆಸುತ್ತಿದ್ದೇವೆ ಅದರ ಬಗ್ಗೆ ಹೆಚ್ಚು ಮಾತನಾಡೋಲ್ಲ ಎಂದರು.
ಬಿಹಾರ ಚುನಾವಣೆಯಲ್ಲಿ ನಿತೇಶಕುಮಾರ್ ನೇತೃತ್ವದಲ್ಲಿ ಎನ್.ಡಿ.ಎ ಐತಿಹಾಸಿಕ ಜಯ ಗಳಿಸಲಿದೆ ಹಿಂದೆಂದೂ ಕಾಣದ ಗೆಲವು ಕಾಣಲಿದೆ ಎಂದರು.
ಸನಾತನ ಧರ್ಮದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಸನಾತನ ಧರ್ಮ ಎಂದರೆ ಹಿಂದೂ ಧರ್ಮ ದೇಶದಲ್ಲಿ ಹಿಂದೂ ಧರ್ಮ ಇರೋ ಕಾರಣಕ್ಕಾಗಿ ಶಾಂತಿ ಸುವ್ಯವಸ್ಥೆ ಇದೆ. ಅದೇ ಬೇರೆ ದೇಶಗಳಲ್ಲಿ ಅಶಾಂತಿ ನಲೆ ನಿಂತಿದೆ. ಹೀಗಾಗಿ ಸ್ಟಾಲಿನ್ ಎಂಬ ಅಪ್ರಬುದ್ಧ ಹಿಂದೂ ಧರ್ಮವನ್ನು ಡೆಂಗ್ಯೋ ಪ್ಲೇಗ್ ಎಂದು ಕರೆಯುತ್ತಾರೆ. ಅದೇ ತರಹ ಇದೀಗ ಸಿದ್ದರಾಮಯ್ಯ ಜನರ ದಾರಿ ತಪ್ಪಿಸಲು ಸನಾತನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ವರದಿ: ಸುಧೀರ್ ಕುಲಕರ್ಣಿ




