——————————-…ಕಿತ್ತೂರು ಚೆನ್ನಮ್ಮನ ಉತ್ಸವ-2025 ವಿಶೇಷ ವರದಿ
ಸ್ಥಳ : ಬೈಲಹೊಂಗಲ ಹೌದು ಕ್ರಾಂತಿ ನೆಲ ಕಿತ್ತೂರಿನಲ್ಲಿ ಈಗ 201 ನೇ ವೀರ ರಾಣಿ ಚೆನ್ನಮ್ಮನವರ ವಿಜಯೋತ್ಸವದ ಅದ್ದೂರಿ ಸಂಭ್ರಮ. ನಾಳೆಯಿಂದ ಪ್ರಾರಂಭವಾಗಲಿರುವ 3 ದಿನಗಳ ನಡೆಯಲಿದ್ದು ವರ್ಷದಿಂದ ವರ್ಷಕ್ಕೆ ಸಾಕಷ್ಟು ಮೆರುಗು ಪಡೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜುರವರು ಕಿತ್ತೂರು ಸಂಸ್ಥಾನದ ಅತ್ಯಂತ ಪ್ರಮುಖ ಸ್ಥಳವಾಗಿದ್ದ ಕೊನೆ ಗಡಿ ಗ್ರಾಮ ವನ್ನೂರಿನಲ್ಲಿರುವ ಐತಿಹಾಸಿಕ ಸ್ಮಾರಕಗಳು ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ಬೆಳಕು ಚೆಲ್ಲಿದ್ದಾರೆ.

ಅಷ್ಟಕ್ಕೂ ವನ್ನೂರು ಪ್ರಸ್ತುತ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕೊನೆ ಗಡಿ ಗ್ರಾಮ ಪಂಚಾಯಿತಿ ವನ್ನೂರು. ಕಿತ್ತೂರು ಸಂಸ್ಥಾನದ ಅರಸರಲ್ಲಿ ಅತ್ಯಂತ ಪ್ರಮುಖ ದೊರೆ ಮಲ್ಲಸರ್ಜ ದೇಸಾಯಿಯವರು ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ರೂಪಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮನವರ ಪತಿಯವರಾಗಿದ್ದರು, ಈ ಸಂದರ್ಭದಲ್ಲಿ ಅವರ ಆಡಳಿತ ಸಂದರ್ಭದಲ್ಲಿ ಬಾಂಬೆಯ ಪೆಶ್ವೇಗಳ ಹತ್ತಿರ ಬಂದಿಯಾಗಿ ಬಿಡುಗಡೆಯಾಗಿ ಗೋಕಾಕ್ ನ ಅರಭಾವಿ ಮಠ ದಲ್ಲಿ ಹಾರೈಕೆ ಮಾಡಿಕೊಂಡು 1816 ರಲ್ಲಿ ತೀರಿಕೊಂಡ ನಂತರ ಅವರ ಆಪೇಕ್ಷೆಯಂತೆ ಸಂಸ್ಥಾನದ ಕೊನೆ ಗಡಿ ಗ್ರಾಮ ವನ್ನೂರಿನ ಸ್ಥಳವೊಂದರಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಲಾಯಿತು.
ಎಂಬುದಕ್ಕೆ ವನ್ನೂರು ಗ್ರಾಮದ ಮಧ್ಯಭಾಗದಲ್ಲಿರುವ ಮಲಸರ್ಜಾ ದೇಸಾಯಿ ಯವರ ಸಮಾದಿ ಎಂದೇ ಸ್ಥಳೀಯ ವನ್ನೂರು ಹಾಗೂ ಸುತ್ತಮುತ್ತಲ ಜನ ಬಾಯಲ್ಲಿ ಕಳೆದ 1 ಶತಮಾನದಿಂದ ಇಲ್ಲಿಯವರೆಗೂ ಸಹ ಕರೆಯಲ್ಪದುತ್ತಿದೆ. ಇನ್ನೊಂದು ಕಡೆ ಅದೇ ವನ್ನೂರು ಗ್ರಾಮದಲ್ಲಿರುವ ವೀರರಾಣಿ ಚೆನ್ನಮ್ಮನವರೇ ನಿರ್ಮಾಣ ಮಾಡಿಸಿದರೆಂದೇ ಹೇಳಲಾಗುವ ಚೆನ್ನಮ್ಮನವರ ನೀರಿನ ಬಾವಿಯು ಸಹ ಇದ್ದು ವಿವಿಧ ಶೈಲಿಯಲ್ಲಿ ಭೂಮಿಯಲ್ಲಿ ಕಲ್ಲುಗಳನ್ನು ಜೋಡಿಸಿ ಬಾವಿಯಲ್ಲೇ ಕೋಣೆಗಳನ್ನು ಸ್ಥಾಪಿಸಿ ಪೂಜೆ ಪುರಸ್ಕಾರ ಹಾಗೂ ವಿಶ್ರಾಂತಿಗೆ ಅನುಕೂಲವಾಗುವಂತೆ ನಿರ್ಮಿಸಿದರು ಎಂಬ ಪ್ರತೀತಿ ಇದೆ.
ಇನ್ನೊಂದು ಕಡೆ ತುಂಬಾ ಪ್ರಾಚೀನವಾದ ಪ್ರಭು ಲಿಂಗದೇವರ ದೇವಸ್ಥಾನವು ಸಹ ಇದ್ದು ಈ ದೇವಸ್ಥಾನ ಮುಂಭಾಗದಲ್ಲಿ ಜೈನ ಸಮುದಾಯಕ್ಕೆ ಸೇರಿದ ಶಾಸನವು ಇದೆ. ಇನ್ನೊಂದು ಕಡೆ ವೀರ ರಾಣಿ ಚೆನ್ನಮ್ಮನವರು ಸಂಸ್ಥಾನದ ವ್ಯಾಪ್ತಿಯ ಹಳ್ಳಿಗಳಿಗೆ ಸಂಚಾರ ಮಾಡಿ ಪ್ರಜೆಗಳ ಕಷ್ಟಗಳನ್ನು ಆಲಿಸುವಾಗ ಈ ವನ್ನೂರು ಭಾಗಕ್ಕೆ ಬಂದು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಎಂಬುದಕ್ಕೆ ಸಾಕಷ್ಟು ಕುರುಹುಗಳು, ಕಾವ್ಯಗಳು ಹಾಗೂ ಜನರ ಆಡು ಬಾಷೆಗಳು ಹೇಳುತ್ತಿವೆ.
ಇನ್ನೊಂದು ಕಡೆ ಈ ವನ್ನೂರಿನ ಸ್ಮಾರಕಗಳು ದಿನೇ ದಿನೇ ನಶಿಸಿಹೋಗುತ್ತಿವೆ. ಬರೀ ಕಿತ್ತೂರು ಉತ್ಸವದ ಸಂದರ್ಭದಲ್ಲಿ ಮಾತ್ರ ಈ ವನ್ನೂರಿನ ಸ್ಮಾರಕಗಳ ಸ್ಥಳಗಳಿಗೆ ಸ್ವಚ್ಛತೆ ಭಾಗ್ಯ ಸಿಕ್ಕುತ್ತಿದ್ದು, ವರ್ಷ ಪೂರ್ತಿ ಪಾಳು ಬೀಳುತ್ತಿವೆ ಇನ್ನೊಂದು ಕಡೆ ಚೆನ್ನಮ್ಮನ ಬಾವಿ ಹಾಗೂ ಮಲ್ಲಸರ್ಜ ದೇಸಾಯಿ ಅಂತ್ಯ ಸಂಸ್ಕಾರ ಮಾಡಿದ ಸ್ಥಳ ಎಂದೇ ಹೇಳಲಾಗುತ್ತಿರುವ ಸ್ಥಳ ಹಾಗೂ ಪ್ರಭು ಲಿಂಗದೇವರ ಗುಡಿ ಹಾಗೂ ಶಾಸನಗಳ ಸ್ಮಾರಕಗಳು ನಶಿಸಿ ಹೋಗುತ್ತಿವೆ.
ನಿಧಿ ಗಳ್ಳರ ಆಸೆಗೆ ಬಲಿಯಾಗುತ್ತಿವೆ. ಇನ್ನೊಂದು ಕಡೆ ಮಲಸರ್ಜಾ ದೇಸಾಯಿಯವರ ಅಂತ್ಯ ಸಂಸ್ಕಾರದ ಸ್ಥಳದ ಬಗ್ಗೆ ಸಾಕಷ್ಟು ದ್ವಂದ್ವ ನಿಲುವುಗಳಿವೆ. ಇನ್ನೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಕಣ್ಣಿದ್ದೂ ಕುರುಡಾಗಿದೆ.
ಆದ್ದರಿಂದ ನಮ್ಮ 201 ನೇ ಕಿತ್ತೂರು ಚೆನ್ನಮ್ಮನವರ ವಿಜಯೋತ್ಸವದ ನಿಮಿತ್ಯ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಈ ವನ್ನೂರು ಗ್ರಾಮಕ್ಕೆ ಭೇಟಿಕೊಟ್ಟು
ಐತಿಹಾಸಿಕ ಸ್ಮಾರಕಗಳ ಪ್ರಸ್ತುತ ಪರಿಸ್ಥಿತಿ ಹಾಗೂ ಗತವೈಭವದ ಸಮಗ್ರವಾಗಿ ವರದಿ ತಯಾರಿಸಿ ಕಿತ್ತೂರು ಕಲ್ಮಠದ ಶ್ರೀಗಳು ಹಾಗೂ ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆ ಕ್ಯೂರೇಟರ್ ರಾಘವೇಂದ್ರ, ಹಿರಿಯ ಸಾಹಿತಿ ಕಳಸದ ಹಾಗೂ ಸ್ಥಳೀಯ ವನ್ನೂರು ಗ್ರಾಮದ ಹಿರಿಯರು ಆದ ಅಪ್ಪಾಸಾಹೇಬ್ ದೇಸಾಯಿ ಹಾಗೂ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹ ಮಾಡಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ವನ್ನೂರಿನಲ್ಲಿರುವ ಕಿತ್ತೂರು ಸಂಸ್ಥಾನದ ಅರಸರಿಗೆ ಸೇರಿದ ಐತಿಹಾಸಿಕ ಸ್ಮಾರಕಗಳಿಗೆ ಸಂರಕ್ಷಣೆ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಬಸವರಾಜು




