—————————–ಪೂರ್ವಭಾವಿ ಸಭೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಮಾಹಿತಿ
ನಿಪ್ಪಾಣಿ: ಬೆಳಗಾವಿ ಜಿಲ್ಲೆಯ ಗಡಿಭಾಗ ನಿಪ್ಪಾಣಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸರ್ಕಾರಿ ಕಾರ್ಯಾಲಯ ಸೇರಿ ಎಲ್ಲ ಹಳ್ಳಿಗಳಲ್ಲಿ ರಂಗೋಲಿ, ವಿದ್ಯುತ್ ದೀಪ, ಕನ್ನಡ ಧ್ವಜ, ತಾಯಿ ಭುವನೇಶ್ವರಿ ಮೆರವಣಿಗೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬೆಳಗಾವಿ ಜಿಲ್ಲೆಯಾದ್ಯಂತ ಕನ್ನಡ ಡಿಂಡಿಮ ಬಾರಿಸಲಿದ್ದು ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.

ಎಲ್ಲ ಕನ್ನಡಪರ ಸಂಘಟನೆಗಳು ಆಡಳಿತಾಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಗೌರವದೊಂದಿಗೆ ರಾಜ್ಯೋತ್ಸವ ಆಚರಿಸಬೇಕೆಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು. ಅವರು ನಿಪ್ಪ ಅವರು ನಗರಸಭೆ ಕಾರ್ಯಾಲಯದಲ್ಲಿ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ವೇಳೆಗೆ ತಹಶೀಲ್ದಾರ್ ಮುಜಾಫರ್ ಬಳಿಗಾರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಕಟ್ಟಿ ,ನಗರಾಧ್ಯಕ್ಷೆ ಸೋನಲ ಕೋಠಾಡಿಯಾ,ಪೌರಾಯುಕ್ತ ಗಣಪತಿ ಪಾಟೀಲ ಮಾತನಾಡಿದರು. ಸಭೆಯಲ್ಲಿ ರಾಜ್ಯೋತ್ಸವದಂದು ವೇದಿಕೆ ಹಾಸನ ನಾಡಗೀತೆ ಧ್ವಜಾರೋಹಣ ಕುಂಭಮೇಳ ಪ್ರವೇಶ ದ್ವಾರ ಪ್ರಶಸ್ತಿ ಪತ್ರಿಕೆ ವಿತರಣೆ ಆಯುತಕರ ಘಟನೆಗಳಿಗೆ ನಿರ್ಬಂಧ ಕನ್ನಡ ಬಾವುಟ ಹಾಗೂ ಶಲ್ಯಗಳು ವಿವಿಧ ಕಲಾತಂಡದವರು ರೂಪಕ ರೂಪಕಗಳು ಸೇರಿದಂತೆ ಅನೇಕ ಕಾರ್ಯಗಳ ಕುರಿತು ನಿರ್ಧರಿಸಲಾಯಿತು.
ವಿಶೇಷವೆಂದರೆ ಕನ್ನಡಪರ ಸಂಘಟನೆಗಳಿಂದ ಕನ್ನಡ ಭವನ ನಿರ್ಮಾಣ ಶೇಕಡ 60ರಷ್ಟು ನಾಮಪಲಕಗಳಲ್ಲಿ ಕನ್ನಡ ಕಡ್ಡಾಯ ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ತರಲು ಆಗ್ರಹಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ಉಪನಗರಾಧ್ಯಕ್ಷ ಸಂತೋಷ ಸಂಗಾವಕರ, ಬಿಇಒ ಮಹದೇವಿ ನಾಯ್ಕ, ಕರವೇ ಅಧ್ಯಕ್ಷ ಕಪಿಲ್ ಕಮತೆ, ಕಸಾಪ ಅಧ್ಯಕ್ಷ ಈರಣ್ಣ ಶಿರಗಾವಿ, ಶರಣ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಿಥುನ ಅಂಕಲಿ, ಕನ್ನಡ ಸಂಘಟನೆ ಸದಸ್ಯ ಅನಿಲ ನೆಸ್ಟಿ, ಸಚಿನ ಕಾಂಬಳೆ, ಜಾನಪದ ಸಾಹಿತ್ಯ ಅಧ್ಯಕ್ಷ ಶಿವಾನಂದ ಪುರಾಣಿಕಮಠ, ಗಡಿನಾಡುಕನ್ನಡ ಬಳಗ ಅಧ್ಯಕ್ಷ ಮಹಾದೇವ ಬರಗಾಲೆ, ಮಾರುತಿ ಕೊಣ್ಣೂರ, ಮಹಾದೇವ ಗೋಕಾರ ಸೇರಿ ಎಲ್ಲ ಕನ್ನಡ ಬಳಗ ಸದಸ್ಯರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




