ಬೆಂಗಳೂರು : ಸಿಎಂ ಸಿದ್ದರಾಮಯ್ಯ ಪುತ್ರ ಯತೀoದ್ರ ನೀಡಿರೋ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಇದೀಗ ಕಾಂಗ್ರೆಸ್ ಕಟ್ಟಾಳು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಾತಾಡಿದ ಪರಂ, ಯತೀoದ್ರ ಹೇಳಿಕೆ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ.ಸೈದ್ಧಾಂತಿಕವಾಗಿ ಸತೀಶ್ ಜಾರಕಿಹೊಳಿ ಅವರು ಸಿಎಂ ಸಿದ್ದರಾಮಯ್ಯರನ್ನು ಹೋಲುತ್ತಾರೆ. ಹೀಗಾಗಿ ಯತೀoದ್ರ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಈ ಮಾತಿಗೆ ವಿನಾಕಾರಣ ಹೆಚ್ಚಿನ ಪುಷ್ಠಿ ನೀಡೋದು ಬೇಡ ಎಂದು ತಿಳಿಸಿದ್ದಾರೆ.
ಯತೀoದ್ರ ಸತೀಶ್ ಜಾರಕಿಹೊಳಿ ಮುಂದಿನ ನಾಯಕತ್ವ ವಹಿಸಿಕೊಳ್ಳಲಿ ಎಂದಿದ್ದಾರೆ. ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯನವರ ಉತ್ತರಾಧಿಕಾರಿಯ ಅಂತ ಹೇಳಿದ್ದಾರಾ..? ಸೈದ್ಧಾಂತಿಕವಾಗಿ ಆ ದಾರಿಯಲ್ಲೇ ಸತೀಶ್ ಹೋಗ್ತಾರೆ ಅಂತ ಹೇಳಿದ್ದಾರೆ.
ಅಹಿಂದ ಪ್ರಾರಂಭ ಆದಾಗ ಸತೀಶ್ ಜಾರಕಿಹೊಳಿ ಬಹಳ ಮುಖ್ಯಪಾತ್ರ ವಹಿಸಿದ್ದರು. ಆ ಹಿನ್ನೆಲೆಯಲ್ಲಿ ಅವರು ಹೇಳಿದ್ದಾರೆ ಅದರಲ್ಲಿ ತಪ್ಪೇನಿದೆ ಅದು ಲೀಡರ್ಶಿಪ್ ದೃಷ್ಟಿಯಿಂದ ಮಾತನಾಡಿಲ್ಲ ಎಂದು ಹೇಳಿದರು.
ಸೈದ್ಧಾಂತಿಕವಾಗಿ ಸತೀಶ್ ಜಾರಕಿಹೊಳಿ ಅವರು ಸಿಎಂ ಸಿದ್ದರಾಮಯ್ಯರನ್ನು ಹೋಲುತ್ತಾರೆ. ಹೀಗಾಗಿ ಯತೀoದ್ರ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಈ ಮಾತಿಗೆ ವಿನಾಕಾರಣ ಹೆಚ್ಚಿನ ಪುಷ್ಠಿ ನೀಡೋದು ಬೇಡ ಎಂದು ತಿಳಿಸಿದ್ದಾರೆ.




