ಕಿತ್ತೂರು: ಬೆಳಗಾವಿ ಜಿಲ್ಲೆಯ ಕ್ರಾಂತಿ ನೆಲ ಕಿತ್ತೂರಿನಲ್ಲಿ ಇಂದಿನಿಂದ 201 ನೇ ವೀರ ರಾಣಿ ಚನ್ನಮ್ಮನವರ ವಿಜಯೋತ್ಸವದ ಸಂಭ್ರಮ. ಇಂದಿನಿಂದ 3 ದಿನಗಳ ಕಾಲ ಚೆನ್ನಮ್ಮನ ಕಿತ್ತೂರಿನಲ್ಲಿ ಪ್ರಾರಂಭವಾಗಿರುವ ಕಿತ್ತೂರು ಉತ್ಸವವನ್ನು ಇಂದು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಸ್ಮಿ ಹೆಬ್ಬಾಳ್ಕರ್ ಹಾಗೂ ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಸವದತ್ತಿ ಶಾಸಕ ವಿಶ್ವಾಸ ವೈದ್ಯ, Mlc ಚೆನ್ನರಾಜು ಹಟ್ಟಿಹೊಳಿ, ಶಾಸಕ ಆಸಿಫ್ ಶೇಟ್ ಸೇರಿದಂತೆ ಪೂಜ್ಯ ಶ್ರೀಗಳು ಹಾಗೂ ಎಲ್ಲಾ ಅಧಿಕಾರಿಗಳ ನೇತೃತ್ವದಲ್ಲಿ ಅದ್ದೂರಿಯಾಗಿ ಉದ್ಘಾಟನೆ ಗೊಂಡಿತು.
ವರದಿ: ಬಸವರಾಜು




