—-ದೊಡ್ಡ ಬಿದರಿಕಲ್ಲು ವಾರ್ಡಿನ ಜೆಡಿಎಸ್ ಮುಖಂಡ ಆರ್ ಲಕ್ಕಣ್ಣ ಅವರ ಮನದಾಳದ ಮಾತು
ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ ಅವರ ಸಹಕಾರ ಮತ್ತು ಆಶಿರ್ವಾದದಿಂದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಜೆಡಿಎಸ್ ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ ಎಂದು ದೊಡ್ಡ ಬಿದರಿಕಲ್ಲು ವಾರ್ಡಿನ ಗ್ರೆಟರ್ ಬೆಂಗಳೂರು. ಆಕಾಂಕ್ಷಿ ಅಭ್ಯರ್ಥಿ ಆರ್.ಲಕ್ಕಣ್ಣ ಹೇಳಿದರು.
ಅವರು ತಮ್ಮ ಕಚೇರಿಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿ ಅವರು ನನ್ನ ಅಣ್ಣ ಭೈರೆಗೌಡ ಜೆಡಿಎಸ್ ಪಕ್ಷದ ಕೆಲಸ ಎರಡು,ಮೂರು ದಶಕಗಳಿಂದ ಸಂಘಟನೆ ಮಾಡಿಕೊಂಡು ಬರುತ್ತಿದ್ದೇವೆ ಅದಲ್ಲದೆ ನಮ್ಮ ದೊಡ್ಡ ಬಿದರಿಕಲ್ಲು ವಾರ್ಡಿನ ಜನತೆಗೆ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಮತ್ತು ಕೊವಿಡ್ ಸಮಯದಲ್ಲಿ ಸಾರ್ವಜನಿಕ ಬೆಳಿಗ್ಗೆ ಉಪಹಾರ ಮಧ್ಯಾಹ್ನ ಊಟ, ರೋಗಿಗಳಿಗೆ ಚಿಕಿತ್ಸೆ ಔಷಧಿಗೆ ಸಾವಿಗೆ ನಾವು ಸಹಾಯ ಮಾಡಿದ್ದೇವೆ ಈಗಲೂ ಯಾರಾದರೂ ಕಷ್ಟ ಇದೆ ಅಂತರು ಮನೆಗೆ ಬಂದಾಗ ಅವರಿಗೆ ಸಹಾಯ ಸಹಕಾರ ಮಾಡುತ್ತಿದ್ದೇವೆ.
ನಮ್ಮ ಜೆಡಿಎಸ್ ನಾಯಕ ಜವರಾಯಿಗೌಡರು ಗ್ರೆಟರ್ ಬೆಂಗಳೂರು ಚುನಾವಣೆ ಸಿದ್ದರಾಗಿರಿ ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅವರ ಮಾರ್ಗದರ್ಶನದಲ್ಲಿ ನಾನು ನನ್ನ ಅಣ್ಣ ಭೈರೆಗೌಡ ನಡೆದುಕೊಂಡು ಹೋಗುತ್ತೇವೆ ಎಂದು ಮಾದ್ಯಮದವರ ಮುಂದೆ ಆರ್. ಲಕ್ಕಣ್ಣ ಮಾತನಾಡಿದರು.
ವರದಿ: ಅಯ್ಯಣ್ಣ ಮಾಸ್ಟರ್




