———————————ವಿವಿಧ ರಾಜ್ಯಗಳಿಂದ ಭಕ್ತರ ದಂಡು
ಮೂರುವರೆ ಶಕ್ತಿಪೀಠಗಳಲ್ಲಿ ಒಂದಾದ ಕೊಲ್ಲಾಪುರದ ಮಹಾಲಕ್ಷ್ಮಿಗೆ ಕಳೆದ ನಾಲ್ಕು ದಿನಗಳಿಂದ ಬೆಳಗಿನ ಜಾವದಿಂದ ಕಾಕಡ ಆರತಿ, ಜಲಾಭಿಷೇಕ್,ಫಲಪುಷ್ಪಗಳಿಂದ ಅಲಂಕಾರ ಪೂಜೆ, ಕುಂಕುಮಾರ್ಚನೆ, ನೈವೇದ್ಯದೊಂದಿಗೆ ವಿಶೇಷ ಪೂಜಾಲಂಕಾರಗಳು ನಡೆಯುತ್ತಿದ್ದು, ಧನತ್ರಯೋದಶಿ,ನರಕ ಚತುರ್ದಶಿ, ಹಾಗೂ ಪಾಡ್ಯೆಯ ದಿನಗಳಂದು ಮಹಾಲಕ್ಮಿಗೆ ವಿವಿಧ ರೂಪಗಳಲ್ಲಿ ಅಲಂಕರಿಸಲಾಗಿತ್ತು.
ಕರ್ನಾಟಕ, ಮಹಾರಾಷ್ಟ್ರಆಂಧ್ರ, ಗೋವಾ, ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ಕುಂಕುಮಾರ್ಚನೆ, ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡಿ ಹರಕೆ ಪೂರೈಸಿದರು. ಹಾಗಾದರೆ ಬನ್ನಿ ವೀಕ್ಷಕರೇ ಕೊಲ್ಲಾಪುರದ ಮಹಾಲಕ್ಷ್ಮಿಗೆ ದೀಪಗಳ ಹಬ್ಬದಲ್ಲಿಯ ಅಲಂಕಾರ ಪೂಜೆಯನ್ನು ಕಣ್ತುಂಬಿಕೊಳ್ಳೋಣ
ವರದಿ: ಮಹಾವೀರ ಚಿಂಚಣೆ



