ಹುಮನಾಬಾದ: ಮಾಜಿ ಸಚಿವ ರಾಜಶೇಖರ ಪಾಟೀಲ್ ದಲಿತರ ವಿರೋಧಿಯಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಲಕ್ಷ್ಮೀ ನಾರಾಯಣ ನಾಗ್ವಾರ ಬಣದ ತಾಲ್ಲೂಕು ಸಂಚಾಲಕ ಗೌತಮ ಸೇಡೋಳ ಆರೋಪ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಿಜೆಐ ಬಿ.ಆರ್.ಗವಾಯಿಗೆ ಮಾಡಿರುವ ಅವಮಾನ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹಾಕಲಾದ ಜೀವ ಬೆದರಿಕೆಯನ್ನು ಖಂಡಿಸಿ ಅ.20ರಂದು ಪಟ್ಟಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಈ ಪ್ರತಿಭಟನೆಯಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್,ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್ ಹಾಗೂ ಭೀಮರಾವ್ ಪಾಟೀಲ್ ಪಾಲ್ಗೊಳ್ಳದೇ ಇರುವುದು ನೋಡಿದರೆ ದಲಿತ ವಿರೋಧಿ ಎಂಬುದಕ್ಕೆ ಇದೊಂದು ಘಟನೆ ಮತ್ತೆ ಸಾಕ್ಷಿಯಾಗಿದೆ ಆರೋಪಿಸಿದರು.ಅ.19 ರಂದು
ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ಬ್ರಹತ್ ಮಟ್ಟದಲ್ಲಿ ಜರುಗಿದರಿಂದ ಅದಕ್ಕೆ ಹೆದರಿ ರಾಜಶೇಖರ್ ಪಾಟೀಲ ಸ್ಥಳೀಯವಾಗಿದ್ದರು ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ ಎಂದು ಹೇಳಿದರು.
ದಲಿತ ಮುಖಂಡ ಶಶಿಕಾಂತ ಭಂಡಾರಿ ಮಾತನಾಡಿ,ಪಾಟೀಲ್ ಕುಟುಂಬದವರು ಚುನಾವಣೆಯಲ್ಲಿ ಮಾತ್ರ ದಲಿತದ ಮತಗಳನ್ನು ಬಳಸಿಕೊಳ್ಳುತ್ತಾರೆ.ಆದರೆ ಅವದ ಸಂಕಷ್ಟದ ಸಮಯದಲ್ಲಿ ಹಿಂದೆ ಸರಿಯುತ್ತಾರೆ ಎಂದು ಆರೋಪಿಸಿದರು.




