ಹುಬ್ಬಳ್ಳಿ: ಎಗ್ಗಿಲ್ಲದೆ ನಡೆಯುತ್ತಿದೆ ಮಧ್ಯ ಮಾರಾಟದ ಬಗ್ಗೆ ಕಣ್ಣು ಮುಚ್ಚಿ ಕುಳಿತ ಅಬಕಾರಿ ಇಲಾಖೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜೋಡಳ್ಳಿ ಕ್ರಾಸ್ ನಿಂದ ಕಲಘಟಗಿ ಹೋಗುವ ರಸ್ತೆಯಲ್ಲಿ ನೀರ ಸಾಗರ ಎಂಬುವ ಡಾಬಾದಲ್ಲಿ ಹೆಸರಿಗೆ ಮಾತ್ರ ಡಾಬಾ ಒಮ್ಮೆ ಒಳಗೆ ನೋಡಿದರೆ ಬಾರ್ ಅಂಡ್ ರೆಸ್ಟೋರೆಂಟ್ ಕೂಡ ನಾಚಿಕೆ ಪಡುವಂತೆ ಮಧ್ಯ ಮಾರಾಟ ನಡೆಯುತ್ತಿದೆ ಮಧ್ಯಪ್ರಿಯರಿಗೆ ಸ್ವರ್ಗದಂತಿದೆ.

ಇಲ್ಲಿನ ಮಾರಾಟಗಾರರಿಗೆ ಯಾವುದೇ ಕಾನೂನಿನ ಬೆಲೆ ಇಲ್ಲದಂತಾಗಿದೆ. ಅಬಕಾರಿ ಇಲಾಖೆಯಾಗಲಿ ಹಾಗೂ ಪೊಲೀಸ್ ಇಲಾಖೆಯ ಇತ್ತಕಡೆ ಕಂಡು ಕಾಣದ ಹಾಗೆ ಜಾಣ ಕುರುಡರು ಆಗಿದ್ದಾರೆ. ಧಾರವಾಡದಿಂದ ಕಲಘಟಗಿ ಹೋಗುವ ರಸ್ತೆಯಲ್ಲಿ ಈ ರೀತಿ ಅಕ್ರಮ ಮಧ್ಯ ಮಾರಾಟ ಮಾರುತ್ತಿದ್ದಾರೆ ಅಂದರೆ ಇವರು ಎಂಥಾ ಪ್ರಭಾವಿಗಳು ಇರಬಹುದು…? ಅನ್ನುವುದು ಯಕ್ಷಪ್ರಶ್ನೆಯಾಗಿದೆ.
ವರದಿ: ಗುರುರಾಜ ಹಂಚಾಟೆ




