ಶಿಗ್ಗಾವಿ: ಆಟೋರಿಕ್ಷಾ ಭೀಕರ ಅಪಘಾತದಲ್ಲಿ ಆಟೋ ದಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿಗ್ಗಾವಿ ರಾಷ್ಟ್ರೀಯ ಹೆದ್ದಾರಿ ಬೈಪಾಸ, ರಾಜಸ್ತಾನ ದಾಬ್ಬಾ ಬಳಿ ನಡೆದಿದೆ.
ಸರೋಜಾ ವಿರುಪಾಕ್ಷಪ್ಪ ಕಾಮನಹಳ್ಳಿ (35) ಮೃತ ದುರ್ದೈವಿ. ಶಿಗ್ಗಾವಿ ತಾಲ್ಲೂಕು ಮುಗಳಿ ಗ್ರಾಮದ ನಿವಾಸಿ. ಇಂದು ಸಂಜೆ ಶಾಯಿ ಗಾರ್ಮೆಂಟ್ಸ್ ಇಂದ ಮನೆಗೆ ತೆರಳುತ್ತಿದ್ದ ವೇಳೆ ಬಂಕಾಪುರ ಕಡೆಯಿಂದ ಆಟೋ, ದಿವಾಡ್ರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಡೈವರ ಸೆರಿ 5 ಜನ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಸ್ಥಳೀಯ ಶಿಗ್ಗಾವಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲೇ ಓರ್ವ ಮಹಿಳೆ ಸಾವನ್ನಪ್ಪಿದ್ದು ಉಳಿದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ
ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಕೈಗೊಂಡಿದ್ದಾರೆ ಶಿಗ್ಗಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವರದಿ: ರಮೇಶ್ ತಾಳಿಕೋಟಿ




