ಗುರುಮಠಕಲ್ : ಗುರುಮಠಕಲ್ ತಾಲೂಕಿನ ಒರವಲಯದಲ್ಲಿ ಇರುವ ಶ್ರೀ ರಾಮ್ ಎಜ್ಯುಕೇಶನಲ್ ಡೆವಲಪ್ಟೆಂಟ್ ಟ್ರಸ್ಟ್ ಮತ್ತು ಜ್ಞಾನ ವೃಕ್ಷ ನವೋದಯ ತರಬೇತಿ ಕೇಂದ್ರದ ಕಾರ್ಯಕ್ರಮಕ್ಕೆ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ನಿಶ್ಚಲ ಮಂಟಪ ಬೈಲೂರು ಶ್ರೀಗಳು ಭಾಗವಸಲಿದ್ದಾರ
ದಿ ೨೬/೧೦/೨೦೨೫ ರಂದು ಬೆಳಗ್ಗೆ 08 ಗಂಟೆಗೆ ಸುಮಾರಿಗೆ ಗುರುಮಠಕಲ್ ಪಟ್ಟಣದ ಖಾಸಾಮಠಕ್ಕೆ ಭೇಟಿಕೊಟ್ಟು ನಂತರ ಜ್ಞಾನ ವೃಕ್ಷ ನವೋದಯ ತರಬೇತಿ ಕೇಂದ್ರದಲ್ಲಿ ಪಾಲಕರ ಸಭೆ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಯ್ಕೆಗೊಂಡಿರುವ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭಕ್ಕೆ ಪಾಲ್ಗೊಳ್ಳಲಿದ್ದಾರೆ
ಕಾರ್ಯಕ್ರಮವನ್ನು ಆಯೋಜಿಸಲಾದ ಸ್ಥಳ ನಳಂದ ಸ್ಪಡಿ ಕ್ಯಾಂಪಸ್ (ಇಂಡಿಯನ್ ಪೆಟ್ರೋಲ್ ಬಂಕ್ ಹತ್ತಿರ) ನಾರಾಯಣಪೇಟ್ ರೋಡ್ ಗುರುಮಠಕಲ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಆ ಕಾರ್ಯಕ್ರಮದಲ್ಲಿ ಶ್ರೀ ನಿಜಗುಣಾನಂದ ಶ್ರೀಗಳು ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಪಾಲಕರನ್ನು ಉದ್ದೇಶಿಸಿ ಆಶೀರ್ವಚನವನ್ನು ನೀಡಲಾಗುತ್ತದೆ.
ಭಕ್ತಾದಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಮತ್ತು ಬಸವ ಸ್ವತತ್ವವನ್ನು ಮೈಗೂಡಿಸಿಕೊಂಡಿರುವ ಎಲ್ಲಾ ಭಕ್ತಾದಿಗಳು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕೆಂದು ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿಗಳು ಸ್ವಾಗತ ಕೊರಿದ್ದಾರೆ ಮತ್ತು ಶ್ರೀ ರಾಮ್ ಎಜ್ಯುಕೇಶನಲ್ ಡೆವಲಪ್ಟೆಂಟ್ ಟ್ರಸ್ಟ್ ಮತ್ತು ಜ್ಞಾನ ವೃಕ್ಷ ನವೋದಯ ತರಬೇತಿ ಕೇಂದ್ರದ ಅಧ್ಯಕ್ಷರಾದ ರಮೇಶ್ ಅನಸೂರು ಅವರು ಪಾಲಕರು ಮತ್ತು ಸದ್ಭಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಡಿದ್ದಾರೆ.
ವರದಿ: ರವಿ ಬುರನೋಳ್




