————————-ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ರೈತ ಸಂಘ ಬೇಟಿ
ಸೇಡಂ: ತಾಲೂಕಿನ ಪಾಖಲಾ ಗ್ರಾಮದ ಕೊಂಪಲ್ಲಿ ಅರಣ್ಯದಲ್ಲಿ ಶನಿವಾರ ಬೆಳಗಿನಜಾವ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿ ಕೊಂದು ತಿಂದಿರುವ ಘಟನೆ ನಡೆದಿದೆ.

ರೈತ ಅಂಬರೀಶ್ ಪ್ರತಿದಿನದ ಹಾಗೆ ಶನಿವಾರ ಮುಂಜಾನೆ ಹಸುವಿನ ಹಾಲು ಎಳೆಯಲು ಹೋಗಿದ್ದ ಅಲ್ಲಿ ಹಸಿವಿನ ಕರು ಕಾಣಿಸದೆ ಇದ್ದುದರಿಂದ ರೈತ ಗಾಬರಿಗೊಂಡು ಸುತ್ತಮುತ್ತ ನೋಡಿದಾಗ ಒಂದು ದೊಡ್ಡ ಕಲ್ಲಿನ ಮೇಲೆ ಹಸುವಿನ ಕರು ಮೃತ ದೇಹವಾಗಿ ಕಾಣಿಸಿಕೊಂಡಿದ್ದು ಇದಕ್ಕೆ ಕಾರಣ ತಿಳಿಯಲು ಅರಣ್ಯಾಧಿಕಾರಿಗಳಿಗೆ ತಿಳಿಸಿದರು.
ಸ್ಥಳಕ್ಕೆ ಬೇಟಿನೀಡಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡಿಸಿ ಇದು ಚಿರತೆ ದಾಳಿ ಮಾಡಿ ತಿಂದಿರಬಹುದು ಎಂದು ಅಂದಾಜು ಹಾಕಿದರು.
ತದನಂತರ ಅಲ್ಪದೂರದಲ್ಲಿ ಚಿರತೆಯ ಹೆಜ್ಜೆಯ ಗುರುತುಗಳು ಸಿಕ್ಕಿದ್ದು ಇದು ಚಿರತೆ ಎಂದು ಸ್ಪಷ್ಟನೆ ಮಾಡಿದರು. ಕರುವಿನ ಪೋಸ್ಟ್ಮಾರ್ಟಂ ಚಿಕಿತ್ಸೆಗಾಗಿ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ನಡೆಸಿದರು.
ವಿಷಯ ತಿಳಿದ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷರಾದ ಅನಿಲ್ ಪೊಟೇಲಿ ಬೇಟಿ ನೀಡಿ ನೊಂದ ರೈತನಿಗೆ ಸಾಂತ್ವನ ಹೇಳಿದರು ಮತ್ತು ಸರಕಾರದಿಂದ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು. ಪಾಖಲಾ ಗ್ರಾಮದಲ್ಲಿ ದಿನಾಂಕ ಶನಿವಾರ ಬೆಳಿಗ್ಗೆ ಚಿರತೆ ದಾಳಿ ಮಾಡಿ ರೈತರಿಗೆ ಸೇರಿದ ಹಸುವನ್ನು ಕೊಂದು ತಿಂದ ಘಟನೆ ನಡೆದಿದ್ದು, ಈ ದಾಳಿಯಿಂದ ಗ್ರಾಮಸ್ಥರಲ್ಲಿ ಭಯ ಹಾಗೂ ಆತಂಕ ಉಂಟಾಗಿದೆ. ಸಾಕುಪ್ರಾಣಿ ಹಾನಿಯಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗಿದೆ.
ಗ್ರಾಮದ ಜನರಿಗೆ ಸುರಕ್ಷತೆ ಕಲ್ಪಿಸಲು ಹಾಗೂ ಚಿರತೆ ಸೆರೆ ಹಿಡಿಯಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಗ್ರಾಮದಲ್ಲಿ ಇದೇ ರೀತಿಯ ದಾಳಿಗಳು ಪುನರಾವೃತ್ತಿಯಾಗದಂತೆ ಸೂಕ್ತ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ವಿನಂತಿಸುತ್ತಿದ್ದೇವೆ.
ವಿಷಯದ ತೀವ್ರತೆಯನ್ನು ಗಮನಿಸಿ, ಸಂಬಂಧಿತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಪರಿಹಾರ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಸ್ಪಷ್ಟ ನಿಲುವು ಹೊಂದಲು ದಯವಿಟ್ಟು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷರಾದ ಅನಿಲ್ ಪೊಟೇಲಿ, ಕಾರ್ಯಾಧ್ಯಕ್ಷರಾದ ಸಾಬಪ್ಪ ಅಬ್ಬಗಳ, ಬಸಪ್ಪ ಪಾಖಲಾ, ರೈತ ಅಂಬರೀಶ್ ಸೇರಿದಂತೆ ಗ್ರಾಮಸ್ಥರು ಭಾಗಿಯಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




