ಬೆಂಗಳೂರು: ಹಲಾಲ್ ಪ್ರಮಾಣ ಪತ್ರ ಹೊಂದಿರುವ ಸಂಸ್ಥೆಗಳನ್ನು ತಕ್ಷಣ ರದ್ದು ಮಾಡುವಂತೆ ಆಗ್ರಹ ಮಾಡಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ದೇಶದಾದ್ಯಂತ ನಿಷೇಧ ಮಾಡಬೇಕು
ತಮ್ಮ ಪತ್ರದಲ್ಲಿ ಉತ್ತರ ಪ್ರದೇಶದಲ್ಲಿ ಈಗಾಗಲೇ ಹಲಾಲ್ ಉತ್ಪನ್ನಗಳನ್ನು ನಿಷೇಧ ಮಾಡಲಾಗಿದೆ. ಅದೇ ರೀತಿಯಲ್ಲಿ ದೇಶದಾದ್ಯಂತ ಹಲಾಲ್ ಉತ್ಪನ್ನಗಳನ್ನ ಹಾಗೂ ಅದನ್ನ ಪ್ರಮಾಣೀಕರಿಸುವ ಕೆಲಸ ಮಾಡುವ ಸಂಸ್ಥೆಗಳನ್ನ ನಿಷೇಧ ಮಾಡಬೇಕು ಎಂದು ಮನವಿ ಮಾಡಿದ್ದಾರೆ.




