Ad imageAd image

ಕಿತ್ತೂರು ಉತ್ಸವದಲ್ಲಿ ಅಧಿಕಾರಿಗಳ ನಡುವೆ ಬಹಿರಂಗ ಕಿತ್ತಾಟ

Bharath Vaibhav
ಕಿತ್ತೂರು ಉತ್ಸವದಲ್ಲಿ ಅಧಿಕಾರಿಗಳ ನಡುವೆ ಬಹಿರಂಗ ಕಿತ್ತಾಟ
WhatsApp Group Join Now
Telegram Group Join Now

ಬೆಳಗಾವಿ: ಕಿತ್ತೂರು ಉತ್ಸವದಲ್ಲಿ ಅಧಿಕಾರಿಗಳ ನಡುವೆ ಬಹಿರಂಗವಾಗಿ ಕಿತ್ತಾಟ ನಡೆದಿದೆ. ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದ ಕೋಟೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ.

ಗಾಯಕ ಹನುಮಂತ ಅವರಿಗೆ ಎರಡನೇ ಬಾರಿಗೆ ಆಡಲು ಅವಕಾಶ ನೀಡಿದಕ್ಕೆ ಎಸ್ಪಿ ಗರಂ ಆಗಿದ್ದಾರೆ. ಸಮಯಾವಕಾಶ ಮುಗಿದರೂ ಹಾಡಲು ಅವಕಾಶ ನೀಡಿದ್ದಕ್ಕೆ ಎಸ್‌ಪಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರ ಮೇಲೆ ಗರಂ ಆಗಿದ್ದಾರೆ.

ನಿನಗೆ ಗೊತ್ತಾಗಲ್ವಾ ಕಾರ್ಯಕ್ರಮ ಹೇಗೆ ನಡೆಸಬೇಕು ಎಂದು ಗದರಿದ್ದಾರೆ. ಯಾಕೆ ಅವರಿಗೆ ಮತ್ತೆ ಹಾಡಲು ಅವಕಾಶ ಕೊಟ್ಟಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಮುಂಬೈನಿಂದ ಸಿಂಗರ್ ಬಂದಿದ್ದಾರೆ. ಈಗಿನ ಕಾರ್ಯಕ್ರಮ ಬಂದ್ ಮಾಡಿ ಎಂದು ಹೇಳಿದ್ದಾರೆ.

ನಾನೇನು ಮಾಡಲಿ ಬೇಕಾದರೆ ಬಂದ್ ಮಾಡಿಕೊಳ್ಳಿ ಎಂದು ವಿದ್ಯಾವತಿ ಭಜಂತ್ರಿ ಹೇಳಿದ್ದಾರೆ. ಕೈ ತೋರಿಸಿ ಅಧಿಕಾರಿಗಳ ನಡುವೆ ಮಾತನ ಚಕಮಕಿ ನಡೆದಿದೆ. ಈ ವೇಳೆ ಶಾಸಕ ಬಾಬಾ ಸಾಹೇಬ್ ಪಾಟೀಲ್ ಅವರು ಮೂಕ ಪ್ರೇಕ್ಷಕರಾಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!