ರಾಯಬಾಗ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸುಕ್ಷೇತ್ರ ಯಲ್ಪಾರಟ್ಟಿ ಗ್ರಾಮದಲ್ಲಿ. ಶ್ರೀಅರಣ್ಯ ಶಿದ್ದೇಶ್ವರ ದೇವಸ್ಥಾನದ ಕಳಸಾರೋಹಣ ಮತ್ತು ಲಕ್ಷ ದೀಪೋತ್ಸವ ಹಾಗೂ ಶ್ರೀ ಜನವ ತಾಯಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅತೀ ವಿಜೃಂಭಣೆಇಂದ ನಡೆಯಿತು.

ಶ್ರೀ ಅರಣ್ಯಸಿದ್ಧ ಹಾಗೂ ಮಲಕಾರಿಸಿದ್ದರ ದೇವಸ್ಥಾನದ ಎರಡು ದಿನದ ಕಳಸಾರೋಹಣ ಹಾಗೂ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಬೇರೆ ಗ್ರಾಮದ ದೇವರ ಪಾಲಿಕೆಗಳು. ಈ ದೇವಸ್ಥಾನದಲ್ಲಿ ಸೇರಿದ್ದವು.
ಡೊಳ್ಳು ಹಾಗೂ ವಾದ್ಯ ಶಬ್ದದೊಂದಿಗೆ ನೋಡುವವರ ಕಣ್ಣು ಸೆಳೆಯುತ್ತಿತ್ತು.
ಹಾಗೂ ಈ ಶುಭ ಸಮಾರಂಭದಲ್ಲಿ ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಹೇಂದ್ರ ತಮ್ಮನ್ನವರ, ಶ್ರೀ ಪ್ರತಾಪ್ ರಾವ ಪಾಟೀಲ, ಶ್ರೀಯುತ ಶಿವರಾಜಅಣ್ಣಾ ಪಾಟೀಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಶ್ರೀ ಪರಮಪೂಜ್ಯ ಅವಧೂತ ಸಿದ್ಧ ಮಹಾರಾಜರು ಸುಕ್ಷೇತ್ರ ಮುಮ್ಮೆಟಗುಡ್ಡ. ಸ್ವಾಮೀಜಿಯವರು ಶ್ರೀ ಕೃಷ್ಣ ಹಾಗೂ ಹೇಮರೆಡ್ಡಿಮಲ್ಲಮ್ಮ ಇವರ ಆಚಾರ ವಿಚಾರ ಭಕ್ತಿ ಶಕ್ತಿಯ ಬಗ್ಗೆ ಹಾಗೂ ನಮ್ಮ ನಾಡಿನಲ್ಲಿ ಹುಟ್ಟಿದಂತಹ ಸಿದ್ಧಪುರುಷರು ಹಾಗೂ ಜಂಗಮರ ಬಗ್ಗೆ ಮನಮುಟ್ಟುವಂತೆ ಪೂಜ್ಯರು
ಮಾತನಾಡಿದರು.
ಈ ಶುಭ ಸಮಾರಂಭದಲ್ಲಿ ಅನೇಕ ಗಣ್ಯ ಮಾನ್ಯರು. ಮಠಾಧೀಶರು ಹಾಗೂ ಸ್ವಾಮೀಜಿಯವರು ಮತ್ತು ಊರಿನ ಗ್ರಾಮಸ್ಥರು ಗುರುಹಿರಿಯರು ಸೇರಿ ಈ ಕಾರ್ಯಕ್ರಮವನ್ನು ಅತಿ ವಿಜ್ರಂಭಣೆಯಿಂದ ನೆರವೇರಿಸಿದರು.
ವರದಿ : ಭರತ ಮುರಗುಂಡೆ




