Ad imageAd image

ಆಸ್ಪತ್ರೆಯಲ್ಲಿ ರಕ್ತ ಪಡೆದ ಐವರು ಮಕ್ಕಳಿಗೆ ಹೆಚ್‌ಐವಿ ಸೋಂಕು

Bharath Vaibhav
ಆಸ್ಪತ್ರೆಯಲ್ಲಿ ರಕ್ತ ಪಡೆದ ಐವರು ಮಕ್ಕಳಿಗೆ ಹೆಚ್‌ಐವಿ ಸೋಂಕು
WhatsApp Group Join Now
Telegram Group Join Now

ರಾಂಚಿ: ಜಾರ್ಖಂಡ್ ನ ಪಶ್ಚಿಮ ಸಿಂಗ್ ಭೂಮ್ ಜಿಲ್ಲೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಆಸ್ಪತ್ರೆಯೊಂದರಲ್ಲಿ ರಕ್ತ ಪಡೆದ ಐವರು ಮಕ್ಕಳು ಹೆಚ್‌ಐವಿ ಸೋಂಕು ತಗುಲಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಮಾಡಿದ ನಂತರ 7 ವರ್ಷದ ಥಲಸ್ಸೆಮಿಯಾ ರೋಗಿ ಸೇರಿ ಕನಿಷ್ಠ ಐವರು ಮಕ್ಕಳಿಗೆ ಹೆಚ್‌ಐವಿ ಪಾಸಿಟಿವ್ ಇರುವುದು ಪತ್ತೆಯಾಗಿದೆ.

ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಚೈಬಾಸಾದಲ್ಲಿರುವ ಸದರ್ ಆಸ್ಪತ್ರೆಯಲ್ಲಿ ಥಲಸ್ಸೆಮಿಯಾಗೆ ರಕ್ತ ವರ್ಗಾವಣೆ ಮಾಡಿದ ನಂತರ ಏಳು ವರ್ಷದ ಬಾಲಕನಿಗೆ ಎಚ್‌ಐವಿ ಸೋಂಕು ತಗುಲಿದ ಘಟನೆಯನ್ನು ಎರಡು ಪ್ರತ್ಯೇಕ ತಂಡಗಳು ತನಿಖೆ ನಡೆಸಲಿವೆ. ಪಶ್ಚಿಮ ಸಿಂಗ್‌ಭೂಮ್ ಸಿವಿಲ್ ಸರ್ಜನ್ ಡಾ. ಸುಶಾಂತೋ ಮಜ್ಹೀ ದೃಢಪಡಿಸಿದ್ದಾರೆ,

ಒಂದು ವಾರದ ಹಿಂದೆ ಬಾಲಕನಿಗೆ ಸೋಂಕು ತಗುಲಿದೆ. ತಮ್ಮ ಮಗುವಿಗೆ ಸೇಡಿನ ಕೃತ್ಯದಲ್ಲಿ ಉದ್ದೇಶಪೂರ್ವಕವಾಗಿ ಸೋಂಕು ತಗುಲಿದೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.

ಆದಾಗ್ಯೂ, ನಾವು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ಅವನಿಗೆ ನಿಜವಾಗಿಯೂ ಹೆಚ್‌ಐವಿ ಪಾಸಿಟಿವ್ ಬಂದಿದೆ, ಆದರೆ ಅದು ಇಲ್ಲಿನ ಬ್ಯಾಂಕ್‌ನಿಂದ ಬಂದ ರಕ್ತದಿಂದಲೋ ಅಥವಾ ಬೇರೆಡೆಯಿಂದ ಬಂದ ರಕ್ತದಿಂದಲೋ ಎಂದು ಖಚಿತಪಡಿಸಿಕೊಳ್ಳಬೇಕು. ಸೋಂಕಿತ ಸೂಜಿಗಳ ಮರುಬಳಕೆ ಸೇರಿದಂತೆ ಹೆಚ್‌ಐವಿ ಸೋಂಕಿಗೆ ಕಾರಣವಾಗುವ ಹಲವು ಅಂಶಗಳಿವೆ ಎಂದು ಡಾ. ಮಜ್ಹೀ ಹೇಳಿದ್ದಾರೆ.

ಬಾಲಕನ ಪೋಷಕರು ಚೈಬಾಸಾದಲ್ಲಿರುವ ಸದರ್ ಆಸ್ಪತ್ರೆಯ ಥಲಸ್ಸೆಮಿಯಾ ಘಟಕದ ರಕ್ತ ವರ್ಗಾವಣೆ ಮಾಡಿದ ನಂತರ ಅವನಿಗೆ ಸೋಂಕು ತಗುಲಿದೆ ಎಂದು ಆರೋಪಿಸಿದ್ದಾರೆ. ಅವರು ಪಶ್ಚಿಮ ಸಿಂಗ್‌ಭೂಮ್ ಡಿಸಿಗೆ ದೂರು ನೀಡಿದ ನಂತರ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!