ಸಿರುಗುಪ್ಪ: ತಾಲ್ಲೂಕಿನ ಎಸ್.ಇ.ಎಸ್ ಆಂಗ್ಲ ಮಾಧ್ಯಮ ಹಿರಿಯ ಮತ್ತು ಪ್ರೌಢಶಾಲೆ ಶಾಲೆಯ ವಿದ್ಯಾರ್ಥಿಗಳು ಚದುರಂಗ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಉಪಾಧ್ಯಾಯಿನಿ ಲಿಲ್ಲಿ ಥಾಮಸ್ ಅಭಿನಂದಿಸಿದರು.
ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ 17 ಮತ್ತು14 ವರ್ಷ ವಯೋಮಾನದ ಒಳಗಿನ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಾಹಿ ಚರಣ್, ಭೂಮಿಕ ಮತ್ತು ಮೈತ್ರಿ ಚದುರಂಗ ಆಟದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ನಮ್ಮ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆಂದು ತಿಳಿಸಿದರು.
ದೈಹಿಕ ಶಿಕ್ಷಕರಾದ ವೈ. ಡಿ. ವೆಂಕಟೇಶ್ ಅವರು ಮಾತನಾಡಿ ಯಾದಗಿರಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ನಡೆಯುವ ರಾಜ್ಯಮಟ್ಟದಲ್ಲೂ ಚತುರತೆಯಿಂದ ಉತ್ತಮವಾಗಿ ಆಟವನ್ನು ಆಡುವ ಮೂಲಕ ವಿಜೇತರಾಗಿ
ಶಾಲೆಗೆ ಕೀರ್ತಿ ತರಬೇಕೆಂದು ತಿಳಿಸಿದರು. ಇದೇ ವೇಳೆ. ಶಿಕ್ಷಕರಾದ ಅನ್ನಪೂರ್ಣ, ಸುಬ್ರಹ್ಮಣ್ಯಂ ರಾಜು, ರಾಮಲಿಂಗಪ್ಪ, ಮಾಲಮ್ ಬೀ, ಆಶಾರಾಣಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ವರದಿ: ಶ್ರೀನಿವಾಸ ನಾಯ್ಕ




