ಹುಬ್ಬಳ್ಳಿ:ದಾಜೀಬಾನ್ ಪೇಟೆಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಶ್ರೀ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ಹುಬ್ಬಳ್ಳಿ ಧಾರವಾಡ ಆಶ್ರಯದಲ್ಲಿ ಅಕ್ಟೋಬರ್ ೨೯ ರಂದು ಬೆ. ೧೦ ಗಂಟೆಗೆ ಸಮಾಜದ ಕುಲಪುರುಷ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಮಹೋತ್ಸವ ನಿಮಿತ್ತವಾಗಿ ಶ್ರೀ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಯ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಚೀಪ್ ಟ್ರಸ್ಟಿ ಸತೀಶ್ ಮೆಹರವಾಡೆ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಅಂದು ಬೆ.೬ ಗಂಟೆಗೆ ಸಂತ ವಾರಕರಿ ಮಂಡಳಿಯಿಂದ ಕಾಕಡಾರತಿ, ೮ ಗಂಟೆಗೆ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಗೆ ಅಭಿಷೇಕ, ಬಳಿಕ ತೊಟ್ಟಿಲು ಹಾಕುವ ಕಾರ್ಯಕ್ರಮ ಹೋಮ-ಹವನ ನೆರವೇರಲಿದೆ. ಬೆ. ೯ ಗಂಟೆಗೆ ಧ್ವಜಾರೋಹಣ, ೧೦, ೩೦ ಕ್ಕೆ ಬೆಳ್ಳಿ ಮೂರ್ತಿ ಹಾಗೂ ತೈಲ ಚಿತ್ರಗಳ ಭವ್ಯ ಮೆರವಣಿಗೆ ನೆರವೇರಲಿದೆ. ಸಂಜೆ ೬ ಗಂಟೆಗೆ ಶ್ರೀ ತುಳಜಾಭವಾನಿ ದೇವಸ್ಥಾನದ ಎದುರಿಗಿನ ವೇದಿಕೆಯಲ್ಲಿ ಜಯಂತ್ಯೋತ್ಸವದ ಸಮಾರೋಪ ಸಮಾರಂಭ ಜರುಗಲಿದೆ.
ಉದ್ಘಾಟನೆಯನ್ನು ಉಪ ಸಭಾಧ್ಯಕ್ಷ ಉದ್ದಪ್ಪ ಲಮಾಣಿ, ಅಖಿಲ ಭಾರತೀಯ ಎಸ್.ಎಸ್.ಕೆ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಹರಿಸಾ ಖೋಡೆ ಉದ್ಘಾಟಕರಾಗಿ ಭಾಗಿಯಾಗಲಿದ್ದಾರೆ.

ಎಸ್.ಎಸ್.ಕೆ ಸಮಾಜದ ಅದ್ಯಕ್ಷ ಸತೀಶ್ ಮೆಹರವಾಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಯಾಗಿ ಶಾಸಕರಾದ ಪ್ರಸಾದ್ ಅಬ್ಬಯ್ಯ, ಮಹೇಶ್ ಟೆಂಗಿನಕಾಯಿ, ಗಣ್ಯರಾದ ಶಾಮ್ ಕಬಾಡೆ, ಶಶಿಕುಮಾರ್ ಮೆಹರವಾಡೆ, ಶ್ರೀಧರ ಪವಾರ್, ಮಾಜಿ ಶಾಸಕ ಅಶೋಕ ಕಾಟವೆ, ಜಯಂತಿಲಾಲ್ ಕಟಾರಿಯಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭಾಸ್ಕರ್ ಜಿತೂರಿ, ರಂಗಾ ಬದ್ದಿ, ವಿಠ್ಠಲ ಲದವಾ, ನೀಲಕಂಠಸಾ ಜಡಿ, ಅಶೋಕ ಕಾಟವೆ, ಸಾಯಿನಾಥ್ ದಲಬಂಜನ್ ಪಾಲ್ಗೊಂಡಿದ್ದರು.
ವರದಿ:ಸುಧೀರ್ ಕುಲಕರ್ಣಿ




