Ad imageAd image

ದಲಿತರಿಗೆ ಹೇರ್ ಕಟ್ ಮಾಡಲು ನಿರಾಕರಣೆ ಘಟನೆ ಹಿನ್ನೆಲೆ

Bharath Vaibhav
ದಲಿತರಿಗೆ ಹೇರ್ ಕಟ್ ಮಾಡಲು ನಿರಾಕರಣೆ ಘಟನೆ ಹಿನ್ನೆಲೆ
WhatsApp Group Join Now
Telegram Group Join Now

————————-ರಿಬ್ಬನ್ ಪಲ್ಲಿ ಗ್ರಾಮದಲ್ಲಿ ಪೊಲೀಸರ ಸಮ್ಮುಖದಲ್ಲಿ ಬಗೆಹರಿದ ಸಮಸ್ಯೆ

ಸೇಡಂ: ತಾಲೂಕಿನ ಗಡಿಭಾಗ ಗ್ರಾಮವಾದ ರಿಬ್ಬನ್ ಪಲ್ಲಿ ಗ್ರಾಮದಲ್ಲಿ ದಲಿತ ಸಮುದಾಯದವರಿಗೆ ಹೇರ್ ಕಟ್ ಮಾಡುವುದಿಲ್ಲ ಎಂದು ಅಂಗಡಿ ಮಾಲೀಕ ದಲಿತ ಯುವಕರಿಗೆ ಅವಮಾನಿಸಿದರು.

ರವಿವಾರ ಸಂಜೆ ಗ್ರಾಮದ ದಲಿತ ಯುವಕ ಅಶೋಕ್ ಎಂಬಾತನು ಊರಿನ ಅಂಗಡಿಯೊಳಗೆ ಹೇರ್ ಕಟ್ ಮಾಡಲು ಹೋಗಿದ್ದ ಆದರೆ ಅಂಗಡಿ ಮಾಲೀಕ ನಾಗೇಶ್ ನಮ್ಮೂರಿನ ದಲಿತ ಯುವಕರಿಗೆ ಹೇರ್ ಕಟ್ ಮಾಡುವುದಿಲ್ಲ ಬೇರೆ ಊರಿನವರಿಗೆ ಮಾಡಲು ಸಿದ್ಧ ಎಂದು ಹೇಳಿದರು.

ಈ ಮಾತುಗಳನ್ನು ಕೇಳಿದ ಯುವಕ ರೊಚ್ಚಿಗೆದ್ದು ವಾದ ಮಾಡಿದ. ತದನಂತರ ಸೋಮವಾರ ಬೆಳಗ್ಗೆ ರಿಬ್ಬನ್ ಪಲ್ಲಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಯಿತು. ಈ ವಿಷಯ ನಮ್ಮ ಭಾರತ ವೈಭವ ವರದಿಗಾರರಿಗೆ ತಿಳಿದ ಕೂಡಲೇ ಸ್ಥಳಕ್ಕೆ ಬೇಟಿ ನೀಡಿ ಮಾಹಿತಿ ಪಡೆದರು.

ಪತ್ರಕರ್ತ ವೆಂಕಟಪ್ಪ ಸುಗ್ಗಾಲ್ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಕಾರ್ಯಾಧ್ಯಕ್ಷರಾದ ಸಾಬಪ್ಪ ಅಬ್ಬಗಳ ಅವರು ತರಾಟೆಗೆ ತಗೊಂಡರು, ತದನಂತರ 112ಗೆ ಕರೆ ಮಾಡಿದರು. ವಿಷಯ ತಿಳಿದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬೇಟಿ ಸಮಸ್ಯೆಯನ್ನು ಗಮನಕ್ಕೆ ತೆಗೆದುಕೊಂಡು.

ಅನೇಕ ವಾದವಿವಾದ ನಡೆದ ನಂತರ ಪೋಲಿಸರ ಸಮ್ಮುಖದಲ್ಲಿ ಅಂಗಡಿ ಮಾಲೀಕನಿಗೆ ತಿಳಿ ಹೇಳಿದರು. ಮಾದಿಗ ಸಮಾಜ ಯುವಕರು ಮತ್ತು ಮುಖಂಡರು ಘಟನೆಗೆ ಸಂಬಂಧಿಸಿದಂತೆ ಎಫ್,ಐ,ಆರ್ ಮಾಡಲು ಹೊರಟಿದರು.

ಅಂಗಡಿ ಮಾಲೀಕ ಕ್ಷಮೆ ಕೇಳಿ ಇನ್ನೂ ಮುಂದೆ ಇಂತಹ ಸಮಸ್ಯೆ ಆಗಲಾರದ ಹಾಗೆ ನೋಡಿಕೊಳ್ಳುವೆ. ಅದಕ್ಕಾಗಿ ಪೊಲೀಸರ ಸಮ್ಮುಖದಲ್ಲಿ ನಿಮ್ಮ ಸಮಾಜದವರಿಗೆ ಹೇರ್ ಕಟ್ ಮಾಡಿ ನನ್ನ ತಪ್ಪನ್ನು ಸರಿಪಡಿಸಿಕೊಳ್ಳುವೆನು ಎಂದು ಕೇಳಿಕೊಂಡಾಗ ಸಮದಾನಗೊಂಡ ದಲಿತ ಸಮುದಾಯದವರು ಪೊಲೀಸರ ಸಮ್ಮುಖದಲ್ಲಿ ಹೇರ್ ಕಟ್ ಮಾಡಿಸಿಕೊಂಡು ಎಲ್ಲಾರು ಸಮಾನರು ಎಂಬ ಭಾವನೆಯನ್ನು ಸೃಷ್ಟಿಸಿದರು.

ಘಟನೆ ಸಂಬಂಧಿಸಿದಂತೆ ಮುಧೋಳ ಪೊಲೀಸ್ ಠಾಣೆ ಪಿಸ್ಐ ದೌಲತ್ ಎನ್ ಕೆ ಅವರ ಮಾರ್ಗದರ್ಶನದಲ್ಲಿ 112 ಸಹಯೋಗದಲ್ಲಿ ಸಮಸ್ಯೆ ಬಗೆಹರಿಸಲಾಯಿತು. ಇನ್ನೂ ಮುಂದೆ ಇಂತಹ ಘಟನೆ ಆಗಬಾರದು ಎಂದು ಎಚ್ಚರಿಕೆ ನೀಡಿದರು.

ನಮ್ಮ ಸಮುದಾಯಕ್ಕೆ ದಕ್ಕೆ ಮಾಡಿದರೆ ನಾವು ಸುಮ್ಮನೆ ಬಿಡುವುದಿಲ್ಲ. ಇವತ್ತು ನೀವು ಕ್ಷಮೆ ಕೇಳುತ್ತಿರುವಿರೆಂದು ನಿಮಗೆ ಬದಲಾಗಲು ಒಂದು ಅವಕಾಶ ಕೊಡುತ್ತಿದ್ದೇವೆ. ಇನ್ನೂ ಮುಂದೆ ಇಂತಹ ಘಟನೆ ಕಂಡುಬಂದಲ್ಲಿ ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾವು ಯಾವತ್ತೂ ಸಿದ್ಧರಿರುತ್ತೇವೆ ಎಂದು ತಾಲೂಕು ಮಾದಿಗ ಸಮಾಜದ ಅಧ್ಯಕ್ಷರಾದ ಮಾರುತಿ ಕೊಡಂಗಲ್ ಹೇಳಿದರು.

ನಾವು ವ್ಯಾಪಾರ ಸ್ಥಿತಿಯಲ್ಲಿ ಅಂಗಡಿ ರಸ್ತೆಗೆ ಇದೆ ಅಂದರೆ ಒಬ್ಬ ಭಿಕ್ಷುಕ ಬಂದರು ಸಹ ಅವನಿಂದ ಹಣ ಪಡೆದು ಕೆಲಸ ಮಾಡಿಕೊಡುವ ಜ್ಞಾನ ನಮ್ಮಲ್ಲಿ ಇರಬೇಕು. ನಮ್ಮ ಸಮಾಜದ ಭಾಂದವರು ಇನ್ನೂ ಮುಂದೆ ಇಂತಹ ಘಟನೆಗೆ ಕೈಹಾಕಬಾರದು. ತನ್ನ ವ್ಯಾಪಾರವನ್ನು ವೃದ್ಧಿಪಡಿಸಿಕೊಂಡು ಎಲ್ಲರೊಂದಿಗೆ ಬೆರೆಸಿಕೊಂಡು ಹೋಗಬೇಕು ಎಂದು ಎಚ್ಚರಿಕೆ ನೀಡುತ್ತಿರುವೇ ಎಂದು ತಾಲೂಕ ಹಡಪದ್ ಸಮಾಜದ ಪ್ರಧಾನ ಕಾರ್ಯದರ್ಶಿ ಅಂಬರೀಶ್ ಉಡಗಿ ಹೇಳಿದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!