ಸೇಡಂ: ಸ್ವಾಭಿಮಾನಿ ಮಾದಿಗ ಬಂಧುಗಳೇ ಸಮಾಜದ ಯುವ ಮಿತ್ರರೇ ಹಾಗೂ ಸಮಾಜದ ಗುರು ಹಿರಿಯರೇ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ ದಿನಾಂಕ 1/11/2025 ರಂದು ಶನಿವಾರ ಮುಂಜಾನೆ 10:00 ಗಂಟೆಗೆ ಸೇಡಂ ಸರಕಾರಿ ನೌಕರರ ಭವನದಲ್ಲಿ ನಮ್ಮ ಮಾದಿಗ ಸಮಾಜದ ಕುಲದೇವರಾದ ಶ್ರೀ ಶಿವ ಶರಣ ಮಾದರ ಚೆನ್ನಯ್ಯನವರ ಜಯಂತೋತ್ಸವದ ಅಂಗವಾಗಿ ಹಾಗೂ ಸಮಾಜದ ಬೆಳವಣಿಗೆ ಕುರಿತು ಸಭೆಯನ್ನು ಕರೆಯಲಾಗಿದೆ.
ಆದಕಾರಣ ಸೇಡಂ ತಾಲೂಕಿನ ನಗರ ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಾದಿಗ ಸಮಾಜದ ಮುಖಂಡರು ನಗರಸಭೆ ಸದಸ್ಯರು ಹಾಗೂ ಹಾಲಿ ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಮಾಜಿ ಸದಸ್ಯರು ಮತ್ತು ಮಾದಿಗ ಸಮಾಜದ ವಿವಿಧ ಸಂಘಟನೆಯ ಅಧ್ಯಕ್ಷರೇ ಹಾಗೂ ಸದಸ್ಯರೇ ಸಮಾಜದ ವಿಚಾರವಂತರು ಬುದ್ಧಿಜೀವಿಗಳು ಯುವಕರು ಮಹಿಳೆಯರು ಸಮಾಜದ ಹಿರಿಯರು ಮುಖಂಡರು ರಾಜಕೀಯ ಪ್ರಮುಖ ಮುಖಂಡರು ಸಭೆಗೆ ತಪ್ಪದೇ ಆಗಮಿಸಿ ತಮ್ಮ ಸಲಹೆ ಸೂಚನೆಗಳು ನೀಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇವೆ ಎಂದು ಮಾರುತಿ ಮುಗುಟಿ ಹಾಗೂ ಶ್ರೀ ಶಿವಶರಣ ಮಾದರ ಚೆನ್ನಯ್ಯನ ಅಭಿಮಾನಿ ಸೇಡಂ ರವರು ಪತ್ರಿಕಾ ಪ್ರಕಟಣೆ ಮೂಲಕ ಸಮಾಜದ ಮುಖಂಡರಲ್ಲಿ ಮನವಿ ಮಾಡಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




