ರಾಜಸ್ಥಾನ : ಇಲ್ಲಿನ ಜೈಪುರದಲ್ಲಿ (Jaipur) ಪ್ರತಿವರ್ಷ ನಡೆಯುವ ಪುಷ್ಕರ್ ಜಾನುವಾರು ಜಾತ್ರೆ ಮತ್ತೆ ಜನರ ಹುಬ್ಬೇರುವಂತೆ ಮಾಡಿದೆ.
ಪ್ರತಿಬಾರಿಯಂತೆ ಈ ವರ್ಷವೂ ಸಾವಿರಾರು ಪ್ರಾಣಿಗಳು ಜಾತ್ರೆಯಲ್ಲಿ ಭಾಗವಹಿಸುತ್ತಿದ್ದುಈ ಪೈಕಿ ಒಂದು ಕುದುರೆ ಮತ್ತು ಒಂದು ಎಮ್ಮೆ ಜನರನ್ನು ಆಶ್ಚರ್ಯಕ್ಕೆ ದೂಡಿದೆ.
ಈ ಜಾತ್ರೆಯಲ್ಲಿ ಭಾಗಿಯಾಗಿರುವ ಸಾವಿರಾರು ಪ್ರಾಣಿಗಳ ಪೈಕಿ 15 ಕೋಟಿ ರೂ. ಬೆಲೆಬಾಳುವ ಕುದುರೆ ಜನರ ಹುಬ್ಬೇರಿಸಿದೆ.
ಇನ್ನು ಕುದುರೆಯನ್ನೂ ಮೀರಿಸುವಂತೆ 23 ಕೋಟಿ ರೂ. ಬೆಲೆಬಾಳುವ ಎಮ್ಮೆ ಪ್ರಮುಖ ಕೇಂದ್ರಬಿಂದುವಾಗಿದೆ. ಈ ಎರಡೂ ಪ್ರಾಣಿಗಳು ವ್ಯಾಪಾರಿಗಳನ್ನು ತನ್ನತ್ತ ಆಕರ್ಷಿಸುತ್ತಿವೆ.
ಶಹಬಾಜ್ ಎಂಬ ಕುದುರೆಗೆ ಎರಡೂವರೆ ವರ್ಷ. ಈ ಕುದುರೆ ಚಂಡೀಗಢದ ಗ್ಯಾರಿ ಗಿಲ್ ಒಡೆತನದ್ದಾಗಿದೆ. ಈ ಕುದುರೆ 15 ಕೋಟಿ ರೂ. ಬೆಲೆ ಬಾಳುವ ಕುದುರೆಯಾಗಿದೆ.
ಹೀಗಾಗಿ ಈ ವರ್ಷದ ಪುಷ್ಕರ್ ಜಾನುವಾರು ಜಾತ್ರೆಯಲ್ಲಿ ಜನಪ್ರಿಯ ಪ್ರಾಣಿಗಳಲ್ಲಿ ಈ ಕುದುರೆ ಕೂಡ ಒಂದು.ಇನ್ನು ಅನ್‌ಮೋಲ್ ಎಮ್ಮೆ 23 ಕೋಟಿ ರೂ. ಮೌಲ್ಯ ಹೊಂದಿದೆ.
ಅನ್‌ಮೋಲ್ ಎಮ್ಮೆಗೆ ಪ್ರತಿದಿನ ಹಾಲು, ದೇಸಿ ತುಪ್ಪ ಮತ್ತು ಒಣ ಹಣ್ಣುಗಳನ್ನು ಒಳಗೊಂಡಿರುವ ವಿಶೇಷ ಆಹಾರವನ್ನು ನೀಡಲಾಗುತ್ತದೆ’ ಎಂದು ಮಾಲೀಕರು ತಿಳಿಸಿದ್ದಾರೆ .ಈ ಜಾತ್ರೆಯಲ್ಲಿ ಭಾಗಿಯಾಗಿರುವ ಸಾವಿರಾರು ಪ್ರಾಣಿಗಳ ಪೈಕಿ 15 ಕೋಟಿ ರೂ. ಬೆಲೆಬಾಳುವ ಕುದುರೆ ಜನರ ಹುಬ್ಬೇರಿಸಿದೆ.
ಇನ್ನು ಕುದುರೆಯನ್ನೂ ಮೀರಿಸುವಂತೆ 23 ಕೋಟಿ ರೂ. ಬೆಲೆಬಾಳುವ ಎಮ್ಮೆ ಪ್ರಮುಖ ಕೇಂದ್ರಬಿಂದುವಾಗಿದೆ. ಈ ಎರಡೂ ಪ್ರಾಣಿಗಳು ವ್ಯಾಪಾರಿಗಳನ್ನು ತನ್ನತ್ತ ಆಕರ್ಷಿಸುತ್ತಿವೆ.




