——————————————-ಇನ್ನಿಂಗ್ಸ್ ಮುನ್ನಡೆಯೊಂದಿಗೆ ಕರ್ನಾಟಕಕ್ಕೆ 3 ಅಂಕ
——————————————-ಕರುಣ್ ನಯ್ಯರ್ ಅಜೇಯ, ಭರ್ಜರಿ ಶತಕ
ಶಿವಮೊಗ್ಗ: ಪ್ರಸಕ್ತ ರಣಜಿ ಕ್ರಿಕೆಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು ಇಂದಿಲ್ಲಿ ಮುಕ್ತಾಯವಾದ ಗೋವಾ ವಿರುದ್ಧದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಲೀಡ್ ನೊಂದಿಗೆ ಪಂದ್ಯ ಡ್ರಾ ಮಾಡಿಕೊಂಡಿದೆ.
ಇಲ್ಲಿನ ಕೆ.ಎಸ್.ಸಿ.ಎ ನವುಲಾ ಕ್ರೀಡಾಂಗಣದಲ್ಲಿ ಇಂದು ನಾಲ್ಕನೇ ಹಾಗೂ ಕಡೆಯ ದಿನದ ಪಂದ್ಯ ಡ್ರಾದಲ್ಲಿ ಮುಕ್ತಾಯವಾದಾಗ ಗೋವಾ ತನ್ನ ದ್ವಿತೀಯ ಸರದಿಯಲ್ಲಿ 1 ವಿಕೆಟ್ ಗೆ 143 ರನ್ ಗಳಿಸಿದಾಗ ಉಭಯ ತಂಡಗಳು ಪಂದ್ಯವನ್ನು ಡ್ರಾ ಎಂದು ಒಪ್ಪಿಕೊಂಡವು.
ಮೊದಲ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಲು ವಿಫಲವಾಗಿದ್ದರಿಂದ ಪಂದ್ಯ ಡ್ರಾ ಮಾಡಿಕೊಂಡು ಕೇವಲ 1 ಅಂಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಎರಡನೇ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಪಂದ್ಯ ಡ್ರಾ ಮಾಡಿಕೊಂಡಿದ್ದು, 2 ಪಂದ್ಯಗಳಿಂದ 4 ಅಂಕಗಳಿಸಿದ್ದು, ಬಿ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕರ್ನಾಟಕದ ಪರವಾಗಿ ಅಜೇಯ 174 ರನ್ ಗಳಿಸಿದ ಕರುಣ್ ನಯ್ಯರ ಕರ್ನಾಟಕ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ ಬರಲು ಪ್ರಮುಖ ಪಾತ್ರ ವಹಿಸಿದರು.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 371
ಗೋವಾ ಮೊದಲ ಇನ್ನಿಂಗ್ಸ್ 217 ( ವಿದ್ವತ್ ಕಾವೇರಪ್ಪ 51 ಕ್ಕೆ 5, ಅಭಿಲಾಷ್ ಶೆಟ್ಟಿ 71 ಕ್ಕೆ 3)
ಗೋವಾ ದ್ವಿತೀಯ ಇನ್ನಿಂಗ್ಸ್ 1 ವಿಕೆಟ್ ಗೆ 143
————————————————ಪಂದ್ಯದ ಫಲಿತಾಂಶ: ಪಂದ್ಯ ಡ್ರಾ
————————————————ಕರ್ನಾಟಕಕ್ಕೆ 3, ಗೋವಾಕ್ಕೆ 1 ಅಂಕ




