ಮೂಡಲಗಿ: ಶಿವಾಪೂರ (ಹ ): ಗ್ರಾಮದ ಪಂಚಾಯತ್ ಆವರಣದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಾರ್ವಜನಿಕರು ಸೋಮವಾರ ದಂದು ಧರಣಿ ನಡೆಸಿದರು.

ಗ್ರಾಮದ ಕುರಿದಡ್ಡಿಯ ಹತ್ತಿರ ಇರುವ ಗಾವಠಾಣ ಜಾಗೆಯಲ್ಲಿ ಕೆಲವೊಂದು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿದ್ದು ಅದನ್ನು ತಕ್ಷಣ ತೆರವು ಗೊಳಿಸಬೇಕೆಂದು ಅಗ್ರಹಿಸಿ ಪಂಚಾಯತ ಆವರಣದಲ್ಲಿ ಪಂಚಾಯತ ಸದಸ್ಯರು ಹಾಗೂ ಸಾರ್ವಜನಿಕರು ಸೋಮವಾರದಂದು ಅಹೋರಾತ್ರಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಗ್ರಾ.ಪಂ ಸದಸ್ಯ ಮಲ್ಲಪ್ಪಾ ಡವಳೇಶ್ವರ ಮಾತನಾಡಿ ಗಾವಠಾಣ ಜಾಗದಲ್ಲಿ ಶೌಚಾಲಯ ನಿರ್ಮಾಣ, ಸಮುದಾಯ ಭವನ ದಂತಹ ಅಭಿವೃದ್ಧಿ ಕೆಲಸಕ್ಕೆ ಮಿಸಲಿದ್ದು ಅಂತಹ ಗಾವಠಾಣ ಜಾಗದಲ್ಲಿ ನಿರ್ಮಿಸುತ್ತಿರುವ ಕಟ್ಟಡವನ್ನು ತಕ್ಷಣವೇ ನಿಲ್ಲಿಸಿ ಅದನ್ನು ತೆರವು ಗೊಳಿಸಬೇಕೆಂದು ಹೇಳಿದರು, ಅಹೋರಾತ್ರಿ ಧರಣಿ ನಡೆಸುತ್ತಿರುವ ಪಂಚಾಯತ್ ಆವರಣದಲ್ಲಿ ಪಗಡೆ ಆಡುವ ಮುಖಾಂತರ ಧರಣಿ ಮುಂದುವರಿಸಿದರು,
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಶಿವಲಿಂಗ ಹೊಸ್ತೋಟ, ಮುತ್ತಪ್ಪ ಡವಳೇಶ್ವರ, ಲಕ್ಷ್ಮಣ ಖಾನಟ್ಟಿ, ಹಾಗೂ ಗ್ರಾಮದ ದುರಿನರಾದ ದುರ್ಗಪ್ಪ ಕೆಳಗಡೆ, ಪ್ರಕಾಶ್ ಪಾಟೀಲ, ಶಂಬಪ್ಪ ಸೌದಿ, ಮಲ್ಲಪ್ಪ ಬೆಳಗಲಿ, ಬಸು ಅಂದಾನಿ, ಅರ್ಜುನ ಕಿತ್ತೂರ ಸೇರಿದಂತೆ ಪಂಚಾಯತ್ ಸದಸ್ಯರು, ಸಾರ್ವಜನಿಕರು ಭಾಗಿಯಾಗಿದ್ದರು.
ವರದಿ: ರಾಜು ಮುಂಡೆ




