Ad imageAd image

ಅಥಣಿ: ಗಡಿನಾಡಿನಲ್ಲಿ ಕನ್ನಡ ಜಾಗೃತಿ – ಬೃಹತ್ ಬೈಕ್ ರ‍್ಯಾಲಿ ಆಯೋಜನೆ

Bharath Vaibhav
ಅಥಣಿ: ಗಡಿನಾಡಿನಲ್ಲಿ ಕನ್ನಡ ಜಾಗೃತಿ – ಬೃಹತ್ ಬೈಕ್ ರ‍್ಯಾಲಿ ಆಯೋಜನೆ
WhatsApp Group Join Now
Telegram Group Join Now

ಅಥಣಿ:  ತಾಲೂಕಿನ ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಮೂಡಿಸುವ ಉದ್ದೇಶದಿಂದ, ಅಥಣಿಯ ಸಿದ್ದೇಶ್ವರ ದೇವಸ್ಥಾನದಿಂದ ಮಂಗಸೂಳಿ ಮಲ್ಲಯ್ಯ ದೇವಸ್ಥಾನವರೆಗೆ ನವೆಂಬರ್ 31, 2025ರಂದು ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಅಥಣಿ ತಾಲೂಕು ಅಧ್ಯಕ್ಷ ಆಕಾಶ ನಂದಗಾವ ತಿಳಿಸಿದ್ದಾರೆ.

ಅವರು ಪಟ್ಟಣದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಅಥಣಿ ತಾಲೂಕು ಮಹಾರಾಷ್ಟ್ರ ಗಡಿಯ ಭಾಗವಾಗಿರುವುದರಿಂದ ಕೆಲವು ಹಳ್ಳಿಗಳಲ್ಲಿ ಕನ್ನಡವನ್ನು ಕಡೆಗಣಿಸುವ ಘಟನೆಗಳು ಕಾಣಿಸಿಕೊಳ್ಳುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
“ಕನ್ನಡ ಜಾಗೃತಿಯೊಂದಿಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವವನ್ನು ಪ್ರತಿ ಹಳ್ಳಿಗಳಲ್ಲೂ ವಿಜೃಂಭಣೆಯಿಂದ ಆಚರಿಸಲು ಜಾಗೃತಿ ಅಭಿಯಾನವನ್ನು ಆರಂಭಿಸಿದ್ದೇವೆ,” ಎಂದರು ಅವರು.

ಸುಮಾರು 500 ಕ್ಕೂ ಹೆಚ್ಚು ಬೈಕ್‌ಗಳು ಭಾಗವಹಿಸುವ ಈ ಬೃಹತ್ ರ‍್ಯಾಲಿ ಮೂಲಕ ಗಡಿನಾಡಿನ ಜನರಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶವಿದೆ. ಈ ಸಂದರ್ಭದಲ್ಲಿ ಕನ್ನಡ ರಹಿತ ನಾಮಫಲಕಗಳು, ಬ್ಯಾನರ್‌ಗಳು, ಬಂಟಿಂಗ್ಸ್ ತೆಗೆದುಹಾಕುವ ಕ್ರಮ ಕೈಗೊಳ್ಳಲಾಗುವುದಾಗಿ ಅವರು ಹೇಳಿದರು.

ಜಯ ಕರ್ನಾಟಕ ಸಂಘಟನೆಯ ತಾಲೂಕು ಉಸ್ತುವಾರಿ ರವಿ ಬಡಕಂಬಿ ಮಾತನಾಡಿ, “ಗಡಿ ಭಾಗದ ಕೆಲವು ಹಳ್ಳಿಗಳಲ್ಲಿ ಶೇಕಡಾ 60ರಷ್ಟು ಮರಾಠಿ ಪ್ರಭಾವ ಕಂಡುಬರುತ್ತಿದೆ. ಕನ್ನಡದ ಕಡೆಗಣನೆ ನಡೆಯುತ್ತಿರುವ ಈ ಹಿನ್ನಲೆಯಲ್ಲಿ ಕನ್ನಡ ಪ್ರಭಾವವನ್ನು ಪುನಃ ಬಲಪಡಿಸಲು ಮತ್ತು ಜಾಗೃತಿ ಮೂಡಿಸಲು ಬೈಕ್ ರ‍್ಯಾಲಿ ಪ್ರಮುಖ ಪಾತ್ರ ವಹಿಸಲಿದೆ,” ಎಂದು ಹೇಳಿದರು.
ಮಾಧ್ಯಮ ಪ್ರತಿನಿಧಿ ಸಂತೋಷ ಬಡಕಂಬಿ ಅವರು, “ಈ ಬಾರಿ ಗಡಿನಾಡಿನಲ್ಲಿ ಕನ್ನಡದ ಕಲರವ ಮೂಡಿಸುವ ದೃಷ್ಟಿಯಿಂದ ವಿಭಿನ್ನ ರೀತಿಯ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. ನಾಡು-ನುಡಿ ಕುರಿತು ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ,” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಆಕಾಶ ನಂದಗಾವ, ಉಸ್ತುವಾರಿ ರವಿ ಬಡಕಂಬಿ, ಮಾಧ್ಯಮ ಪ್ರತಿನಿಧಿ ಸಂತೋಷ ಬಡಕಂಬಿ, ಪ್ರಧಾನ ಕಾರ್ಯದರ್ಶಿ ಹಣಮಂತ ಕೊಳಗೇರಿ, ಕಾರ್ಯದರ್ಶಿ ಸಿದ್ದರಾಯ ತಾಂವಶಿ, ಸೊಯಬ ಮುಲ್ಲಾ, ರಾಮನಗೌಡ ಪಾಟೀಲ್, ಹಣಮಂತ ಬೋಸಲೇ, ಸಿದ್ದಾರೂಢ ಬಣ್ಣದ, ಅಭಿಷೇಕ್ ಇಚಲಕರಂಜಿ, ಆಕಾಶ ದರೂರ ಸೇರಿದಂತೆ ಹಲವಾರು ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.

ವರದಿ: ಅಜಯ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!