ಸಿಂಧನೂರು: ಅ ೨೯, ಪೊಲೀಸ್ ಉಪ ವಿಭಾಗದ ವತಿಯಿಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸೈಬರ್ ಸುರಕ್ಷಿತಗಾಗಿ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲೂಕ ದಂಡಾಧಿಕಾರಿ ಅರುಣ್ ಎಚ್. ದೇಸಾಯಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ಹಾಗೂ ಡಿವೈಎಸ್ಪಿ ಚಂದ್ರಶೇಖರ್ ಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಅವರು ಈ ಜಾಥಾಕ್ಕೆ ಚಾಲನೆ ನೀಡಿದರು.
ನೂರಾರು ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಈ ಜಾಥಾದಲ್ಲಿ ಪಾಲ್ಗೊಂಡು ತಹಶೀಲ್ದಾರ್ ಕಚೇರಿ ಆವರಣದಿಂದ ನಗರದ ವಿವಿಧ ವೃತ್ತಗಳ ಮಾರ್ಗವಾಗಿ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ಅಂಬೇಡ್ಕರ್ ವೃತ್ತದವರೆಗೆ ಸೈಕಲ್ ಜಾಥಾ ನಡೆಸಿ ಪುನಃ ತಹಶೀಲ್ದಾರ್ ಕಚೇರಿಗೆ ವಾಪಸಾಗಿ ಸೈಬರ್ ಕ್ರೈಮ್ ವಂಚನೆಗೆ ದೇಶದಲ್ಲಿ ಸುಮಾರು ೪೦ ಕೋಟಿ ಜನರು ಸಿಲುಕಿದ್ದು ಇದರಲ್ಲಿ ಅತಿಹೆಚ್ಚು ಸೈಬರ್ ಕ್ರೈಮ್ ಗೆ ಬಲಿಯಾಗಿದ್ದು ಅಕ್ಷರಸ್ಥರಾಗಿದ್ದು ಈ ಅಕ್ಷರವಂತವರು ಅತಿಹೆಚ್ಚು ಮೊಬೈಲ್ ಹಾಗೂ ಕಂಪ್ಯೂಟರ್ ನಲ್ಲಿ ಬಳಕೆ ಮಾಡಿಕೊಳ್ಳುತ್ತಿರುವಾಗ ಸೈಬರ್ ವಂಚಕರು ವಿವಿಧ ಜಾಹಿರಾತುಗಳನ್ನು ಬಿತ್ತರಿಸುತ್ತಿದ್ದು ಜಾಹಿರಾತು ಅಥವಾ ಸಂದೇಶಗಳನ್ನು ಕ್ಲಿಕ್ ಮಾಡಿದರೆ ಸೈಬರ್ ವಂಚನೆಗೆ ಒಳಗಾಗುವುದು ಶತಸಿದ್ದ ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಮೊಬೈಲ್ ಪಾಸ್ವರ್ಡ್ ಬದಲಾಯಿಸುತ್ತ ಜಾಗೃತರಾಗಬೇಕು ಎಂದು ಹೇಳಿದರು.
ವರದಿ: ಬಸವರಾಜ ಬುಕ್ಕನಹಟ್ಟಿ




