ಕಿತ್ತೂರ ಫೌಜೀ ಫ್ಯಾಕ್ಟರಿಯಲ್ಲಿ ನಡೆದ ಕಾರ್ಯಕ್ರಮ
ಚನ್ನಮ್ಮನ ಕಿತ್ತೂರ: ಕಿತ್ತೂರಿನ ಫೌಜೀ ಫ್ಯಾಕ್ಟರಿಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಉತ್ಸಾಹಭರಿತ ಕ್ಯಾಂಪ್ ಫೈರ್ ಕಾರ್ಯಕ್ರಮ ನೆರವೇರಿತು.

ಈ ಕಾರ್ಯಕ್ರಮಕ್ಕೆ ಜೆ.ಎಸ್.ಎಸ್. ಶಾಲೆಯ ಪ್ರಿನ್ಸಿಪಲ್ ತ್ರಿವೇಣಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ,ಈ ಶಿಬಿರದ ಮುಖ್ಯ ಗುರಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಜವಾಬ್ದಾರಿಯುತ ನಾಗರಿಕ ಮತ್ತು ಆತ್ಮವಿಶ್ವಾಸಿ ನಾಯಕನನ್ನಾಗಿ ರೂಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ಸಂಸ್ಥಾಪಕರಾದ ಪರ್ವೇಜ್ ಹವಾಲ್ದಾರ್ ಅವರು ಮಾತನಾಡಿ ಈ ಶಿಬಿರದ ಉದ್ದೇಶ ವಿದ್ಯಾರ್ಥಿಗಳಲ್ಲಿ ನಾಯಕತ್ವ ಶಿಸ್ತಿನ ತಂಡದ ಕೆಲಸ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವುದು ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಫಸ್ಟ್ ಎಯ್ಡ್, ಟೆಂಟ್ ಹಾಕುವುದು,ಪೆರೇಡ್, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು ನೈಸರ್ಗಿಕ ಅಧ್ಯಯನಗಳಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು. ಶಿವಾನಂದ, ಕ್ಯಾಪ್ಟನ್ ವೀರಭದ್ರ, ಮಂಜುನಾಥ್ ತಳವಾರ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು, ದೇಶಭಕ್ತಿ ಗೀತೆಗಳು ಹಾಗೂ ಕ್ಯಾಂಪ್ ನೃತ್ಯಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತರಬೇತುದಾರರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶ್ರಮಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ತಳವಾರ, ಸತೀಶ್ ಪವಾರ್, ವಿಜಯಲಕ್ಷ್ಮಿ ಅಂಗಡಿ, ಚಂದಿಕಾ ಪೆಡ್ಡಿ, ಸೋಮು ಸಗಲದ, ಸಂಗಮೇಶ್ ಹುಣಸಿಗಿ ಇದ್ದರು.
ವರದಿ: ಜಗದೀಶ ಕಡೋಲಿ




