ಹ್ಯಾಮಿಲ್ಟನ್: ಆತಿಥೇಯ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು 5 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಇಲ್ಲಿನ ಸೆಡಾನ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 36 ಓವರುಗಳಲ್ಲಿ 175 ರನ್ ಗಳಿಗೆ ಆಲೌಟಾಯಿತು. ನ್ಯೂಜಿಲೆಂಡ್ 33.1 ಓವರುಗಳಲ್ಲಿ 5 ವಿಕೆಟ್ ಗೆ 177 ರನ್ ಗಳಿಸಿ ಸುಲಭ ಜಯ ಪಡೆಯಿತು.




