ಕಾಗವಾಡ: ಶಿವಾನಂದ ಪದವಿ ಪೂರ್ವ ಮಹಾವಿದ್ಯಾಲಯ ಕಾಗವಾಡ ಎನ್ ಎಸ್ ಎಸ್ ಏಳು ದಿನಗಳ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ದತ್ತು ಗ್ರಾಮ ಮಂಗಸೂಳಿಯಲ್ಲಿ ನೆರವೇರಿತು.
ಸಾನಿಧ್ಯವನ್ನು ವಹಿಸಿದ ಶ್ರೀ ಯತೀಶ್ವರಾನಂದ ಸ್ವಾಮೀಜಿಯವರು ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ರವೀಂದ್ರ ಡಿ ಪೂಜಾರಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ಬಾಳು ಆರ್ ಭಜಂತ್ರಿ, ಗ್ರಾಮ ಪಂಚಾಯತ ಸದಸ್ಯರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದ ಪೂಜೆ ಮಾಡುವುದರೊಂದಿಗೆ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಪ್ರಾಸ್ತಾವಿಕವಾಗಿ ಬಿ ಎ ಪಾಟೀಲ ಕಾರ್ಯದರ್ಶಿಗಳು ಎಸ್ಎಂಎ ಟ್ರಸ್ಟ್ ಕಾಗವಾಡ ಇವರು ಪ್ರಾಸ್ತಾವಿಕ ಭಾಷಣ ಮಾಡುತ್ತ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವವನ್ನು ಕುರಿತು ಸ್ವಯಂಸೇವಕರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಜಯ ತಳವಳಕರ ಅಧ್ಯಕ್ಷರು ದಲಿತ ಮಹಾ ಒಕ್ಕೂಟ ಬೆಳಗಾವಿ ಇವರು ಮಾತನಾಡಿ ಎನ್ಎಸ್ಎಸ್ ಶಿಬಿರದಿಂದ ವಿವಿಧತೆಯಲ್ಲಿ ಏಕತೆಯನ್ನು ಮೂಡಿಸಬಹುದು ಎಂದು ತಿಳಿಸಿದರು.
ಮುಂದುವರಿದು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ರವೀಂದ್ರ ಅಣ್ಣ ಪೂಜಾರಿಯವರು ಮಾತನಾಡಿ ನಮ್ಮ ಗ್ರಾಮದಲ್ಲಿ ನೀವು ಶಿಬಿರವನ್ನು ಹಾಕಿಕೊಂಡಿದ್ದು ನಮಗೆ ತುಂಬಾ ಸಂತೋಷವಾಗಿದೆ. ನಮ್ಮಿಂದ ಸಹಾಯ ಸಹಕಾರವನ್ನು ಮಾಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮ ಕುರಿತು ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಯತೀಶ್ವರನಂದ ಸ್ವಾಮೀಜಿಯವರು ಆಶೀರ್ವಚನ ಮಾಡಿದರು. ವಿ ಎಸ್ ತುಗಶೆಟ್ಟಿ, ಡಾಕ್ಟರ್ ಎಸ್ ಪಿ ತಳವಾರ, ಪಿ ಬಿ ನಂದಾಳೆ, ಅಮರ ಪಾಟೀಲ, ದಿಲೀಪ ಮಗದುಮ, ಸಂಜಯ ಸೂರ್ಯವಂಶಿ ಪಿಡಿಓ, ಜಿ ಎಂ ಶಿಂದೆ, ಶ್ರೀರಾಮಚಂದ್ರ ಪಾಟೀಲ ಮುಖ್ಯಾಧ್ಯಾಪಕರು ಎಂಬಿಎಸ್ ಮಂಗಸುಳಿ, ಡಿ ಪಿ ಧಾರವಾಡೆ ಮುಖ್ಯಾಧ್ಯಾಪಕರು ಎಂಜಿಎಸ್ ಮಂಗಸುಳಿ, ಶ್ರೀಮತಿ ಆರ್ ಓ ನಾಯ್ಕರ ಮುಖ್ಯಾಧ್ಯಾಪಕಿ ಕೆಪಿಎಸ್ಸಿ ಮಂಗಸೂಳಿ, ರವೀಂದ್ರ ಪಾಟೀಲ, ಬಾಬಾಸಾಹೇಬ ಪಾಟೀಲ, ಅನಿಲ ತಾಂದಳೆ, ಸಂದೀಪ ಪಾಟೀಲ, ಪ್ರಮೋದ ಪೂಜಾರಿ, ನಿವಾಸ ಮೋರೆ, ಧನಾಜಿ ಪಾಟೀಲ ಹಾಗೂ ಎಲ್ಲಾ ಗ್ರಾಮ ಪಂಚಾಯತ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆಯನ್ನು ತಂದು ಕೊಟ್ಟರು.
ಶಿವಾನಂದ ಕಾಲೇಜಿನ ಎಲ್ಲ ಸಿಬ್ಬಂದಿಯವರು ಎನ್ ಎಸ್ ಎಸ್ ಯೋಜನಾ ಅಧಿಕಾರಿಗಳಾದ ಎಂ ಎಲ್ ಕೋರೆ, ಸಹಾಯಕ ಅಧಿಕಾರಿಗಳಾದ ಫಿ ಬಿ ಸಣ್ಣಕ್ಕಿ, ಯಾದವಾಡೆ ಸರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪಿ ಬಿ ನಂದಾಳೆ ಸ್ವಾಗತಿಸಿಕೊಂಡರು ಟಿ ವಿ ದಬಾಡೆ ವಂದಿಸಿದರು. ಎಂ ಎಸ್ ಮಾಂಜರಿ ಕಾರ್ಯಕ್ರಮ ನಿರ್ವಹಿಸಿ ಕೊಟ್ಟರು.
ವರದಿ:ಚಂದ್ರಕಾಂತ್ ಕಾಂಬಳೆ




