ಬೆಂಗಳೂರು: ಕನ್ನಡ ಸೇನೆ-ಕರ್ನಾಟಕ ಸಂಘಟನೆ ವತಿಯಿಂದ ಅ.31 ಹಾಗೂ ನ.1 ರಂದು ಎರಡು ದಿನ ಕಾಲ 69 ನೇ ಕನ್ನಡ ರಾಜ್ಯೋತ್ಸವವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಆರ್. ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ವಿಷಯ ತಿಳಿಸಿದ ಕುಮಾರ್, ಅ.31 ರಂದು ತುಮಕೂರು ರಸ್ತೆಯ ಚಿಕ್ಕಬಿದರಕಲ್ಲು,ಸರ್ಕಾರಿ ಪ್ರೌಢಶಾಲೆ ಆಟದ ಮೈದಾನದಲ್ಲಿ
ಬೆಳಿಗ್ಗೆ ಶ್ರೀ ನಂಜಾವಧೂತ ಸ್ವಾಮೀಜಿ ಕನ್ನಡದ ಧ್ವಜಾರೋಹಣ ನೆರವೇರಿಸಲಿದ್ದಾರೆ.ದೊಡ್ಡಬಳ್ಳಾಪುರ ಶಾಸಕ ಎ.ವೆಂಕಟರಮಣಪ್ಪ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ.ವಿಧಾನಪರಿಷತ್ ಸದಸ್ಯ ಜವರಾಯಿಗೌಡ, ಮಾಜಿ ಶಾಸಕ ಆರ್. ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ’ಎಂದು ತಿಳಿಸಿದರು.
ಅ.31ರ ಸಂಜೆ ಕರುನಾಡ ವಿಜಯ ವೈಭವ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಹಾಗೂ ನವದೆಹಲಿಯ ಜೈ ಭಾರತ್ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರ್ಗುಡಿ ದಿವ್ಯ ಸಾನಿಧ್ಯ ವಹಿಸಲಿದ್ದು,ಶಾಸಕ ಎಸ್.ಆರ್. ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ಗೋಪಾಲಯ್ಯ, ಎಸ್. ಮುನಿರಾಜು, ಮಾಜಿ ವಿಧಾನಪರಿಷತ್ ಸದಸ್ಯ ಇ. ಕೃಷ್ಣಪ್ಪ ಪಾಲಗೊಲಿದ್ದಾರೆ. ಚಲನಚಿತ್ರ ನಟ ಟೆನ್ನಿಸ್ ಕೃಷ್ಣ ಅವರಿಗೆ ಅಭಿನಂದಿಸಿ ಗೌರವಿಸಲಾಗುವುದು’ಎಂದು ಕೆ.ಆರ್. ಕುಮಾರ್ ಹೇಳಿದರು.
ವೇದಿಕೆ ಕಾರ್ಯಕ್ರಮದ ನಂತರ ಖ್ಯಾತ ವಾದ್ಯಗೋಷ್ಠಿ ತಂಡದವರಿಂದ ರಸಮಂಜರಿ,ಖ್ಯಾತ ಕಲಾವಿದರಿಂದ ನಗೆ ಹಬ್ಬ,ಮಿಮಿಕ್ರಿ,ನೃತ್ಯ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.
ನ.1 ಕನ್ನಡ ರಾಜ್ಯೋತ್ಸವ ದಿನದಂದು ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಸ್ಯಾಂಡಲ್ ವುಡ್ ಸೋಪ್ ಫ್ಯಾಕ್ಟರಿ ಸರ್ಕಲ್ ನ ಬಸವಧಾಮ ಉದ್ಯಾನವನದಲ್ಲಿ ಸಂಜೆ 5.30 ಗಂಟೆಗೆ ನಾಡು,ನುಡಿ ಬಗ್ಗೆ ಜಾಗೃತಿ ಗೀತೆಗಳನ್ನು ಆಯೋಜಿಸಲಾಗಿದೆ’ಎಂದು ಕೆ.ಆರ್. ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಜಿ. ತಿಮ್ಮಪ್ಪ, ನಬೀವುಲ್ಲ , ಚಿಕ್ಕಬಿದರುಕಲ್ಲು ಘಟಕದ ಅಧ್ಯಕ್ಷ ರಮೇಶ್ ,ಸಾಂಸ್ಕೃತಿಕ ಘಟಕ ಅಧ್ಯಕ್ಷ ವಿನಯ್, ಕೃಷ್ಣ ವೈಭವ್ ಹೋಟೆಲ್ ಮಾಲೀಕ ಶ್ರೀನಾಥ್ ಬೈಂದೂರು, ಕಾನೂನು ಸಲಹೆ ಗಾರ ಹನುಮಂತಪ್ಪ, ಚಿದಾನಂದ್, ಪ್ರಕಾಶ್,ಸೋಮಶೇಖರ್ ಸಿದ್ದರಾಜು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




