Ad imageAd image

ಪ್ರಿಯಕರ, ಸ್ನೇಹಿತರ ಜೊತೆ ಸೇರಿ ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಲೆಗೈದ ಮಗಳು

Bharath Vaibhav
ಪ್ರಿಯಕರ, ಸ್ನೇಹಿತರ ಜೊತೆ ಸೇರಿ ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಲೆಗೈದ ಮಗಳು
WhatsApp Group Join Now
Telegram Group Join Now

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಪ್ರಿಯಕರನ ಜೊತೆ ಸೇರಿ ಪುತ್ರಿ ಹೆತ್ತ ತಾಯಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಬೆಂಗಳೂರಿನ ಸುಬ್ರಹ್ಮಣ್ಯಪುರದ ಮನೆಯಲ್ಲಿ ಈ ಒಂದು ಕೊಲೆ ನಡೆದಿದ್ದು, ಪ್ರಿಯಕರ ಮತ್ತು ಆತನ ಸ್ನೇಹಿತರ ಜೊತೆ ಸೇರಿ ಪುತ್ರಿ ತಾಯಿಯ ಕೊಲೆ ಮಾಡಿದ್ದಾಳೆ.

34 ವರ್ಷದ ತಾಯಿಯನ್ನು ಪಾಪಿ ಪುತ್ರಿ ಕೊಲೆ ಮಾಡಿದ್ದಾಳೆ. ಅಕ್ಟೋಬರ್ 25 ರಂದು ನೇತ್ರಾವತಿ ಕೊಲೆಯಾಗಿದ್ದು, ಕೊಲೆ ಮಾಡಿ ಆತ್ಮಹತ್ಯೆ ಬಿಂಬಿಸಲು ದೊಡ್ಡ ಹೈಡ್ರಾಮಾ ಮಾಡಿದ್ದಾಳೆ, ಪೊಲೀಸ್ ತನಿಖೆಯ ವೇಳೆ ನೇತ್ರಾವತಿ ಕೊಲೆಯ ರಹಸ್ಯ ಬಯಲಾಗಿದ್ದು, ಮಿಸ್ಸಿಂಗ್ ಕಂಪ್ಲೇಂಟ್ ನಿಂದ ಕೊಲೆ ರಹಸ್ಯ ಬಯಲಾಗಿದೆ. ಮೃತ ನೇತ್ರಾವತಿಯ ಮಗಳು ಓರ್ವ ಯುವಕರನ್ನು ಪ್ರೀತಿಸುತ್ತಿದ್ದಳು. ಆಗಾಗ ಮನೆಗೆ ಪ್ರಿಯಕರನ್ನು ನೇತ್ರಾವತಿ ಮಗಳು ಕರೆತರುತ್ತಿದ್ದಳು.

ಅಕ್ಟೋಬರ್ 25 ರ ರಾತ್ರಿ ಕೂಡ ಮನೆಗೆ ಬಂದಿದ್ದಾಳೆ , ಪ್ರಿಯಕರನ ಮೂವರು ಸ್ನೇಹಿತರು ಕೂಡ ಮನೆಗೆ ಬಂದಿದ್ದಾರೆ.

11 ಗಂಟೆಗೆ ನೇತ್ರಾವತಿಗೆ ಮಗಳೊಂದಿಗೆ ಇರುವ ಹುಡುಗರ ಕಂಡು ನೇತ್ರಾವತಿ ಜಗಳ ತೆಗೆದಿದ್ದಾಳೆ. ಜಗಳದ ವೇಳೆ ಬಲವಂತವಾಗಿ ನೇತ್ರಾವತಿ ಬಾಯಿಯನ್ನು ಮುಚ್ಚಿದ್ದಾರೆ.

ಬಳಿಕ ಟವಲ್ನಿಂದ ಗುತ್ತಿಗೆ ಬಿಗಿದಾಗ ನೇತ್ರಾವತಿ ಸಾವನ್ನಪ್ಪಿದ್ದಾಳೆ, ಕೊಲೆಯ ಬಳಿಕ ಕುತ್ತಿಗೆಗೆ ಸೀರೆ ಬಿಗಿದು ಫ್ಯಾನ್ ಗೆ ನೇತು ಹಾಕಿದ್ದಾರೆ. ಆಕೆಯ ಕೊಂದ ಬಳಿಕ ಮನೆಯನ್ನು ಲಾಕ್ ಮಾಡಿ ಪ್ರಿಯಕರ ಜೊತೆಗೆ ಪರಾರಿ ಆಗಿದ್ದಾಳೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!