ಮೆಲ್ಬೋರ್ನ್: ಪ್ರವಾಸಿ ಭಾರತ ಕ್ರಿಕೆಟ್ ತಂಡದ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು ಆಸ್ಟ್ರೇಲಿಯಾ 4 ವಿಕೆಟ್ ಗಳಿಂದ ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ರಿಂದ ಮುನ್ನಡೆ ಸಾಧಿಸಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಲು ಇಳಿಸಲ್ಪಟ್ಟ ಭಾರತ ತಂಡವು ನಿಗದಿತ 20 ಓವರುಗಳಲ್ಲಿ ಕೇವಲ 125 ರನ್ ಗಳಿಗೆ ಆಲೌಟಾಯಿತು. ಸುಲಭ ಗೆಲುವಿನ ಗುರಿ ಹೊಂದಿದ್ದ ಆಸ್ಟ್ರೇಲಿಯಾ ತಂಡವು 13.2 ಓವರುಗಳಲ್ಲಿ 6 ವಿಕೆಟ್ ಗೆ 126 ರನ್ ಗಳಿಸಿ ಸುಲಭ ಗೆಲುವು ಪಡೆಯಿತು.
ಸ್ಕೋರ್ ವಿವರ
ಭಾರತ 20 ಓವರುಗಳಲ್ಲಿ 125
ಅಭಿಷೇಕ ಶರ್ಮಾ 68 ( 37 ಎಸೆತ, 8 ಬೌಂಡರಿ, 2 ಸಿಕ್ಸರ್)
ಹರ್ಷಿತ್ ರಾಣಾ 35 ( 33 ಎಸೆತ, 3 ಬೌಂಡರಿ, 1 ಸಿಕ್ಸರ್)
ಜೋಷ್ ಹೆಜಲ್ ವುಡ್ 13 ಕ್ಕೆ 3, ನ್ಯಾಥನ್ ಎಲಿಸ್ 21 ಕ್ಕೆ 2)
ಆಸ್ಟ್ರೇಲಿಯಾ 13.2 ಓವರುಗಳಲ್ಲಿ 6 ವಿಕೆಟ್ ಗೆ 126
ಮಿಚೆಲ್ ಮಾರ್ಷ್ 46 ( 26 ಎಸೆತ, 2 ಬೌಂಡರಿ, 4 ಸಿಕ್ಸರ್)
ಟ್ರೆವರ್ಸ್ ಹೆಡ್ 28 ( 15 ಎಸೆತ, 3 ಬೌಂಡರಿ, 1 ಸಿಕ್ಸರ್), ಜೋಶ್ ಇಂಗ್ಲೀಷ್ 20 ( 20 ಎಸೆತ, 1 ಬೌಂಡರಿ)
ವರುಣ್ ಚರ್ಕವರ್ತಿ 23 ಕ್ಕೆ 2, ಬೂಮ್ರಾ 26 ಕ್ಕೆ 2) ಕುಲದೀಪ್ ಯಾದವ್ 45 ಕ್ಕೆ 2)
ಪಂದ್ಯ ಶ್ರೇಷ್ಠ: ಜೋಸ್ ಹೆಜಲ್ ವುಡ್




