ಬೆಳಗಾವಿ : ಮಹಾರಾಷ್ಟ್ರ ಏಕೀಕರಣ ಸಮಿತಿಯ ಶುಭಂ ಶಳಕೆಯೊಂದಿಗೆ ನಗರದಲ್ಲಿ ಸರದಾರ್ ಮೈದಾನದಲ್ಲಿ ಮಾಳಮಾರುತಿ ಠಾಣೆ ಸಿಪಿಐ ಜೆ.ಎಂ.ಖಾಲಿ ಮಿರ್ಜಿ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.
ವಿವಿಧ ಪೊಲೀಸ್ ಠಾಣೆಗಳಲ್ಲಿ ಶುಭಂ ಶಳಕೆ ವಿರುದ್ದ ಹತ್ತಾರು ಪ್ರಕಣರಗಳು ದಾಖಲಾಗಿದ್ದು, ಇನ್ನೂ ವಿಚಾರಣೆ ಹಂತದಲ್ಲಿವೆ.
ಅಲ್ಲದೇ, ಇದೇ ಸಿಪಿಐ ಖಾಲಿಮಿರ್ಚಿ ಅವರು, ನಾಡದ್ರೋಹಿ ಘೋಷಣೆ ಹಾಗೂ ಶಾಂತಿ ಕದಡುವ ಚಟುವಟಿಕಗಳ ಹಿನ್ನೆಲೆಯಲ್ಲಿ ಹಲವು ಬಾರಿ ಶಳಕೆ ಅವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಿದ್ದರು. ಇದೀಗ ಸೆಲ್ಪಿ ಕ್ಲಿಕ್ಕಿಸಿಕೊಂಡು ಎಂಇಎಸ್ ಮುಖಂಡನನ್ನು ಸೆಲೆಬ್ರಿಟಿಯನ್ನಾಗಿಸುವ ನಡೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.




